Kannada NewsKarnataka News

ವರುಣನ ಆರ್ಭಟಕ್ಕೆ ಜನ ಜೀನ ಅಸ್ತವ್ಯಸ್ತ

ಪ್ರಗತಿವಾಹಿನಿ  ಸುದ್ದಿ, ಹಳ್ಳೂರು -ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಿರಂತರ ಮೂರು ದಿನಗಳಿಂದ ಎಡೆಬಿಡದೆ ಸುರಿದ ಮಳೆಗೆ ಹಳ್ಳ ಕೊಳ್ಳ ಒಡ್ಡುಗಳೆಲ್ಲಾ ತುಂಬಿ ಹರಿಯುತ್ತಿವೆ. ಮಳೆ ಕೊರತೆಯಿಂದ ಕಳೆದ ಎರಡು ದಶಕಗಳಿಂದ ಸಂಪೂರ್ಣ ತುಂಬದ ಹಳ್ಳ ಕೊಳ್ಳ ಬಾವಿಗಳು ಈಗ ಕುಂಭದ್ರೋಣ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ.

ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ರಸ್ತೆಗಳು ಕೆಟ್ಟಿವೆ ಹಾಗೂ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಬಂದೊದಗಿದೆ. ಗೊವಿನ ಜೋಳ, ಅರಿಸಿನ, ಶೇಂಗಾ, ಹುರುಳಿ, ಪಸಲು ತೆಗೆಯುವ ಸಮಯವಿದು. ರೈತರು ವರುಣ ದೇವನಿಗೆ ಕೈಮುಗಿದು ಸಾಕಪ್ಪ ನಿಲ್ಲಿಸು ಮಳೆ ಎಂದು ಬೇಡಿಕೊಳ್ಳುತ್ತಿದ್ದಾರೆ.
1.50 ಕೋಟಿ ರೂ. ಅನುದಾನದಲ್ಲಿ ಹಳ್ಳೂರ್ ಕ್ರಾಸ್‌ದಿಂದ ಶಿವಾಪುರದವರೆಗೆ ಡಾಂಬರಿಕರಣಕ್ಕೆ ರಸ್ತೆ ಕಾಮಗಾರಿಗೆ ಪೂಜೆ ಮಾಡಿ ೨೩ ದಿನ ಕಳೆದಿದೆ. ಆದರೆ ಅತಿಯಾದ ಮಳೆಯಿಂದ ಕಾಮಗಾರಿ ಕೈಗೊಳ್ಳಲಾಗುತ್ತಿಲ್ಲ. ಇರುವ ರಸ್ತೆಯೂ ಕೊಟ್ಟಿಹೋಗಿದೆ.

Related Articles

Back to top button