Latest

*ಸ್ನೇಹಕುಂಜ ಕ್ಷೇಮ ಕುಟೀರ ಉದ್ಘಾಟನೆ: ಸರ್ವ ಸಹಕಾರದ ಭರವಸೆ ನೀಡಿದ ಸಂಸದ ಕಾಗೇರಿ*

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ; ಮನಸೂರೆಗೊಂಡ ಬಾನ್ಸುರೀ ವಾದನ ಕಾಯ೯ಕ್ರಮ

  ಪ್ರಗತಿವಾಹಿನಿ ಸುದ್ದಿ, ಕಾಸರಕೋಡ:   ಸ್ನೇಹಕುಂಜ ಕ್ಷೇಮ ಕುಟೀರ  ಉದ್ಘಾಟನೆಯನ್ನು ಸಂಸದ  ವಿಶ್ವೇಶ್ವರ್‌ ಹೆಗಡೆ ಕಾಗೇರಿ ನೆರವೇರಿಸಿದರು.

ಜನರ  ಆರೋಗ್ಯ ಕಾಳಜಿಯನ್ನು ಒಳಗೊಂಡಂತಹ ಕ್ಷೇಮ ಕುಟೀರದ ಯೋಜನೆ ಮುಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿದ್ದು,   ಸ್ನೇಹಕುಂಜವು ಈ ಕೆಲಸವನ್ನು ಮಾಡಿದ್ದು ಅತ್ಯಂತ  ಶ್ಲಾಘನೀಯ ಎಂದು ಹೇಳಿದರು.

Home add -Advt

ಖ್ಯಾತ ಸಜ೯ನ್‌ರಾಗಿ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಡಾ.ಕುಸುಮಾ ಸೊರಬ್‌ ಅವರು ಗ್ರಾಮೀಣ ಪ್ರದೇಶವನ್ನು  ಆಯ್ಕೆ ಮಾಡಿಕೊಂಡು ಇಲ್ಲಿಯ ಜನರ  ಆರೋಗ್ಯ ಕಾಳಜಿ ತೋರಿಸಿ, ಕೆಲಸ ನಿವ೯ಹಿಸಲು ಆರಂಭಿಸಿದ್ದು ಅತ್ಯಂತ  ಪ್ರಶಂಸನೀಯ ಸಂಗತಿ ಎಂದು ಸಂಸದರು  ತಿಳಿಸಿದರು.

 ಡಾ.ಕುಸುಮಾ ಸೊರಬ್‌ ಅವರ  ಸಮಾಜದ  ಒಳಿತಿನ ಬಗೆಗಿನ  ಕಳಕಳಿ ಹೇಗಿತ್ತೆಂದು  ತಿಳಿಸಿದ ಅವರು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪಕ೯ ವ್ಯವಸ್ಥೆ ಇಲ್ಲದೆ ಇರುವ ಕಾಲಘಟ್ಟದಲ್ಲಿ , ಕುದುರೆಯನ್ನು ಏರಿ ಹಳ್ಳಿಹಳ್ಳಿಗಳಲ್ಲಿ ಸಂಚಾರಮಾಡಿ ಆರೋಗ್ಯದ ಬಗೆಗೆ  ಜನರಲ್ಲಿ ಅರಿವನ್ನು ಮೂಡಿಸುವುದರಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ಹಾಗೆಯೇ ಪರಿಸರದ ಮೇಲಿನ ಅತಿಯಾದ ಪ್ರೀತಿಯ ಬಗೆಗೆ ವಣಿ೯ಸಲು ಸಾದ್ಯವಿಲ್ಲ  ಎಂದರು.

ಡಾ.ಕುಸುಮಾ ಸೊರಬ್‌ ಅವರು  ಅನೇಕ  ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸ್ನೇಹಕುಂಜ  ಸಂಸ್ಥೆಯನ್ನು , ತೆರೆದು ಬಡ ರೋಗಿಗಳಿಗೆ ಚಿಕಿತ್ಸೆ , ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು  ಶಿಕ್ಷಣವನ್ನು ಕೊಡುವಂತಹ ಕೆಲಸಗಳನ್ನು  ಮಾಡಿದರು.  ಮಹಿಳೆಯರ ಸಭಲೀಕರಣಕ್ಕೆಂದು  ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳನ್ನು ಕಟ್ಟಿದರು. ಪ್ರಕೃತಿಗೆ ಮಾರಕ ವಾಗುವಂತಹ ಹಾಗೂ ಜನ ಜಾನುವಾರುಗಳಿಗೆ ಮಾರಕ ವಾಗುವಂತಹ ಸಕಾ೯ರದ  ಯೋಜನೆಗಳ ವಿರುದ್ದ ದಿಟ್ಟತನ ಹೋರಾಟ ಮಾಡಿದ ಬಗೆಗೆ ಎಳೆ ಎಳೆಯಾಗಿ ವಿವರಿಸಿದರು.

ಹಾಗೆಯೇ  ತಾವು ಕೊಡ  ಡಾ.ಕುಸುಮಾ ಸೊರಬ್‌ ಅವರನ್ನು ತುಂಬಾ ಹತ್ತಿರದಿಂದ  ನೋಡಿ ಪ್ರೇರೆಪಿತರಾಗಿದ್ದಾಗಿ ಕಾಗೇರಿ ಹೇಳಿದರು. ಮುಂಬರುವ ದಿನಗಳಲ್ಲಿ  ಒಬ್ಬ ಸಮಾಜಮುಖಿ  ಬದುಕಿನಲ್ಲಿರುವ ನಾನು, ಖಂಡಿತ ಡಾ.ಕುಸುಮಾ ಸೊರಬ್‌ ಅವರು ಕಟ್ಟಿರುವ ಸ್ನೇಹಕುಂಜ ಸಂಸ್ಥೆಯ ಪರವಾಗಿ ನಿಲ್ಲುತ್ತೇನೆ ಎಂಬ ಭರವಸೆಯನ್ನು ನೀಡಿದರು.

ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ  ಸ್ನೇಹಕುಂಜ ಸಂಸ್ಥೆಯ ಅಧ್ಯಕ್ಷ ಡಾ. ರಾಮಚಂದ್ರ ಭಟ್ಟ, ಸಂಸ್ಥೆಯು  ಹೆಚ್ಚಿನ ಸಾಧನೆಯನ್ನು  ಮಾಡಲು ಜನರ ಸಹಕಾರ ಬೇಕು ಎಂದು ಹೇಳಿದರು. ಹಾಗೆಯೇ ಮುಂಬರುವ ದಿನಗಳಲ್ಲಿ ಹಲವಾರು  ಯೋಜನೆಗಳನ್ನು ಅಳವಡಿಸಿಕೊಂಡು ಎಲ್ಲರ ಸಹಕಾರ ಸಹಯೋಗದೊಂದಿಗೆ ಹೆಚ್ಚಿನ  ಸಮಾಜಮುಖಿ ಕಾಯ೯ ಮಾಡುತ್ತೇವೆ  ಎಂದು ಭರವಸೆ ನೀಡಿದರು.

ಸ್ನೇಹಕುಂಜದ ಕಾಯ೯ದಶಿ೯  ಡಾ.ನರಸಿಂಹ ಹೆಗಡೆ, ಸ್ನೇಹಕುಂಜ  ಇದುವರೆಗೆ ನಡೆಸಿಕೊಂಡು ಬಂದಂತಹ  ಪರಿಸರ, ಸಾಮಾಜಿಕ, ಆಥಿ೯ಕ ಹಾಗೂ ಆರೋಗ್ಯ ವಿಚಾರಗಳ ಕುರಿತು  ವಿವರಣೆ ನೀಡಿದರು. ಹಾಗೂ ಸಂಸ್ಥೆಯ ಕಳೆದ ಕೆಲವು ವಷ೯ಗಳಿಂದ ಇಲ್ಲಿಯವರೆಗಿನ  ಸಾಮಾಜಿಕ ಕಾಯ೯ಗಳನ್ನು ವಿವರಿಸಿದರು.

ಅಂತೆಯೇ  ಸ್ನೇಹಕುಂಜ ಸಂಸ್ಥೆಯ ಕಾಯ೯ವನ್ನು ಗಮನಿಸಿ ವಿಶ್ವಸಂಸ್ಥೆಯು  “ಇಕ್ವೇಟರ್‌ ಅವಾಡ೯”  ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಂಡಿರುವುದು  ಹೆಮ್ಮೆಯ  ಕಾಯ೯ಸಾಧನೆ  ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಇನ್ನು ಅನೇಕ ರೀತಿಯಲ್ಲಿ  ಕಾಯ೯ಸಾಧನೆ ಮಾಡುವ ಗುರಿಯನ್ನು  ಹೊಂದಿದ್ದೇವೆ ಹಾಗೂ ಅದಕ್ಕೆ ಇನ್ನು ಸಂಘ ಪರಿವಾರಗಳು ಆಗಿರಲಿ  ಅಥವಾ ಸಮಾಜ ಸೇವಕರಾಗಿರಲಿ  ಹಾಗೂ ಸಮಾಜದಲ್ಲಿ ಜನಸಮೂಹದ ಸಹಕಾರ ಒದಗಿ ಬಂದಲ್ಲಿ   ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇವೆ  ಎಂದು ವಿವರಿಸಿದರು .

ವಿಶ್ವಸ್ಥ ಮಂಡಳಿಯ  ಡಾ.ಮಹೇಶ ಪಂಡಿತ್‌ , ಗೀತಾ ಎಸ್‌ ನಾಯ್ಕ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಕಾಳಿ ಹರಿಜನ  ಅವರು ಕೂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವಸ್ಥ ಮಂಡಳಿಯ  ಆನಂದ ಹೆಗಡೆ ಅವರು ಕಾಯ೯ಕ್ರಮದ ನಿರೂಪಣೆ ಮಾಡಿದರು. ಸಂಸ್ಥೆಯ ಮಹಿಳಾ ಸ್ವಸಹಾಯ  ಸಂಘಗಳು ತಾವು ಉತ್ಪಾದಿಸಿದ ವಿವಿಧ ಉತ್ಪನ್ನಗಳ ಪ್ರದಶ೯ನ ಮತ್ತು ಮಾರಾಟ  ಕೈಗೊಂಡಿದ್ದರು. ಪಣ೯ ಪಶ್ಚಿಮ ಘಟ್ಟ  ರೈತೋತ್ಪಾದಕ ಕಂಪನಿಯು ಸಹ ಮಳಿಗೆಯಲ್ಲಿ ತಾವು ತಯಾರಿಸಿದ  ಉತ್ಪನ್ನಗಳ ಪ್ರದಶ೯ನ ಹಾಗೂ ಮಾರಾಟ ಮಾಡಿದರು.

                                   ಸಭಾಕಾಯ೯ಕ್ರಮದ ನಂತರ  ವಿಶ್ವಖ್ಯಾತ  ಬಾನ್ಸುರೀ  ವಾದಕ ಪಂ.ಪ್ರವೀಣ ಗೋಡ್ಖಿಂಡಿ ಯವರ ಬಾನ್ಸುರೀ  ವಾದನ ಕಾಯ೯ಕ್ರಮ ಮನಸೂರೆಗೊಂಡಿತು. ಈ ಕಾಯ೯ಕ್ರಮದಲ್ಲಿ  ಪಂ.ಪ್ರವೀಣ ಗೋಡ್ಖಿಂಡಿ ಅವರು   ಪುರಿಯಾ ಧನಶ್ರೀ,  ಖಮಾಜ್‌ , ಅಭೋಗಿ ಕಾನಾಡಾ,  ಕೊನೆಯದಾಗಿ ಭೈರವಿ  ರಾಗಗಳನ್ನು ನುಡಿಸಿದರು .  ಪಂ.ಷಡಜ್‌  ಗೋಡ್ಖಿಂಡಿ ಮತ್ತು   ಪಂ. ಕಿರಣ ಗೋಡ್ಖಿಂಡಿ ಸಾಥ್‌ ನೀಡಿದರು. ಕೊನೆಯಲ್ಲಿ ಗೌರೀಶ್‌ ಭಟ್ಟ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button