ಪ್ರಗತಿವಾಹಿನಿ ಸುದ್ದಿ, ಖೇಮಲಾಪುರ :
ಶ್ರೀಶೈಲಕ್ಕೆ ಹೋಗಿ ಬಂದವರು ಹೋಗದಿರುವ ಭಕ್ತರನ್ನು ಆರ್ಶಿರ್ವದಿಸಬೇಕು ಎಂದು ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಗಳು ಹೇಳಿದರು.
ಗ್ರಾಮದ ಮಲ್ಲಿಕಾರ್ಜನ ದೇವಾಸ್ಥಾನದಲ್ಲಿ ಸೋಮವಾರ ಕಂಬಿ ಐದೇಶಿ ನಿಮಿತ್ಯ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವ ದೇವಸ್ಥಾನಗಳಲ್ಲಿ ಸ್ವಚ್ಛತೆ ಇರುತ್ತದೆಯೋ ಆ ದೇವಸ್ಥಾನದಲ್ಲಿ ದೇವರು ಇರುತ್ತಾನೆ. ಭಕ್ತಿಯಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಬೆಳಗ್ಗೆ 9 ಗಂಟೆಗೆ ಸಕಲ ವಾಧ್ಯಮೆಳದೊಂದಿಗೆ ಮಲ್ಲಿಕಾರ್ಜನ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಅಪ್ಪಣ್ಣ ಬೆವನೂರ, ಮುದ್ದಕಪ್ಪಾ ಸಂಕೇಶ್ವರ , ದುಂಡಪ್ಪಾ ಗುಡೋಡಗಿ, ಮಲ್ಲು ಕೋಳಿ, ಈರಪ್ಪಾ ಮಗದ್ಮು, ಸಂಗಪ್ಪಾ ಬೆವನೂರ , ಸಿದ್ರಾಂಮ ಅಂಬಿ, ಶಿಕ್ಷಕ ರಣಧೀರ ಇದ್ದರು. ಶಿಕ್ಷಕ ಸಿದ್ದು ಮಿರ್ಜೆ ನಿರೂಪಿಸಿ ವಂದಿಸಿದರು.
ಗ್ರಾಮದ ಮಲ್ಲಿಕಾರ್ಜನ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ಭಜನೆ, ದಾಸೋಹ ಕಾರ್ಯಕ್ರಮ ನಡೆಯುತ್ತದೆ . ಪ್ರತಿ ವಾರವೂ 500-600 ಜನ ಸೇರಿ ಅನ್ನ ಪ್ರಸಾದ ಸೇವಿಸುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ