Latest

ಸ್ವಪಕ್ಷೀಯರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿರುವ ಶಾಸಕ ಆನಂದ ಸಿಂಗ್ ಫೋಟೋ ಬಹಿರಂಗ

ಶಾಸಕ ಗಣೇಶ ಅಮಾನತು

     ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಈಗಲ್ಟನ್ ರೆಸಾರ್ಟ್ ನಲ್ಲಿ ತಮ್ಮದೇ ಪಕ್ಷದ ಕಂಪ್ಲಿ ಶಾಸಕ ಗಣೇಶ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ ಸಿಂಗ್ ಅವರ ಫೋಟೋಗಳು ಬಹಿರಂವಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲಿರುವ ಫೋಟೋ ಹರಿದಾಡುತ್ತಿದ್ದು, ಕಣ್ಣು, ಮುಖ ಊದಿಕೊಂಡಿವೆ.  ಫೋಟೋ ನೋಡಿದರೆ ಅವರ ಮೇಲೆ ನಡೆದ ಹಲ್ಲೆಯ ಗಂಭೀರತೆ ಅರ್ಥವಾಗುವಂತಿದೆ. 

ಈ ಮಧ್ಯೆ ಶಾಸಕ ಗಣೇಶ ಅವರನ್ನು ಕಾಂಗ್ರೆಸ್ ನಿಂದ ಅಮಾನತುಗೊಳಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕೆ.ಜೆ.ಜಾರ್ಜ್ ಹಾಗೂ ಕೃಷ್ಣ ಭೈರೇಗೌಡ ನೇತೃತ್ವದ ಸಮಿತಿ ರಚಿಸಲಾಗಿದೆ. 

Home add -Advt

 

 

 

Related Articles

Back to top button