Latest

ಹರಿದಾಸ ಹಬ್ಬದ ಶನಿವಾರದ ಕಾರ‍್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಗರದ ಹರಿದಾಸ ಸೇವಾ ಸಮಿತಿಯಿಂದ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಹರಿದಾಸ ಹಬ್ಬ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು  ಶನಿವಾರ ಬೆಳಿಗ್ಗೆ ೮ ಗಂಟೆಗೆ ೧೦೦೮ ಜನರಿಂದ ಸಾಮೂಹಿಕ ಶ್ರೀ ವಿಷ್ಣುಸಹರ್ಸನಾಮ ಪಾರಾಯಣ ನಡೆಯಲಿದೆ.

ಬೆಳಿಗ್ಗೆ ೧೦ ರಿಂದ ಮ.೧ ಗಂಟವರೆಗೆ ಶ್ರೀರಾಮದೇವ ಪೂಜೆ, ಅಭಿಷೇಕ ಹಾಗೂ ತೊಟ್ಟಿಲು ಪೂಜೆ. ಪಂ. ಬಿಂದು ಮಾಧವಾಚಾರ್ಯ ನಾಗಸಂಪಿಗೆ ಹಾಗೂ ಪಂ. ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ ಇವರಿಂದ ಉಪನ್ಯಾಸ, ನಂತರ ತೀರ್ಥ ಪ್ರಸಾದ ನಡೆಯಲಿದೆ.

ಮಧ್ಯಾಹ್ನ ೩ ಗಂಟೆಗೆ ಶ್ರೀ ಗುರು ಗೋವಿಂದ ವಿಠಲ ಭಜನಾ ಮಂಡಳ, ಲಕ್ಷ್ಮೀ ಸೋಬಾನ ಭಜನಾ ಮಂಡಳ, ಹರಿಪ್ರಿಯಾ ಭಜನಾ ಮಂಡಳಿ ಹಾಗೂ ಜೈಹರಿ ವಿಠ್ಠಲ ಭಜನಾ ಮಂಡಳಿಗಳಿಂದ ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯುವುದು.

Home add -Advt

ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಇವರಿಂದ ಉಪನ್ಯಾಸ, ಶ್ರೀಪಾದಂಗಳಿಂದ ಅಮೃತೋಪದೇಶ, ಅಲ್ಲದೇ ದಾಸವಾಣಿ ಕಾರ‍್ಯಕ್ರಮ ಪಂ. ಡಾ. ಪ್ರಸನ್ನ ಗುಡಿಯವರಿಂದ ನಡೆಯಲಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button