Latest

ಹಾಲಸಿದ್ಧೇಶ್ವರ ಜಾತ್ರೆ ನಿಮಿತ್ತ ವಿವಿಧ ಕಾರ್ಯಕ್ರಮಗಳು

ಪ್ರಗತಿವಾಹಿನಿ ಸುದ್ದಿ, ಗೋಕಾಕ:

ತಾಲೂಕಿನ ಮಿಡಕನಟ್ಟಿ ಗ್ರಾಮದ ಶ್ರೀ ಹಾಲಸಿದ್ದೇಶ್ವರ ಜಾತ್ರೆ ಮಾ.೪ ರಿಂದ ಆರಂಭಗೊಂಡಿದ್ದು ೮ರವರೆಗೆ ನಡೆಯಲಿದೆ. ೫ ರಂದು ಮಧ್ಯಾಹ್ನ ೧೨ ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ, ಸಂಜೆ ೪ಕ್ಕೆ ತೇರಿನ ಕಳಸ ಇಡುವುದು, ರಾತ್ರಿ ಮೌನೇಶ್ವರ ಜಾನಪದ ನಾಟ್ಯ ಸಂಘ ಘಟಪ್ರಭಾ ಇವರಿಂದ ಶ್ರೀ ಕೃಷ್ಣ ಪಾರಿಜಾತ ನಾಟಕ ನಡೆಯಲಿವೆ.
ಮಾ.೬ ರಂದು ಬೆಳಗ್ಗೆ ೧೧ಕ್ಕೆ ’೧ ನಿಮಿಷ ಓಡುವ ಬಂಡಿ (ಗಾಡಾ ಚಕ್ಕಡಿ)’ ಸ್ಪರ್ಧೆ, ರಾತ್ರಿ ೮ಕ್ಕೆ ಹುಳಿ ಹೊಯ್ಯುವುದು, ೯ಕ್ಕೆ ಡೊಳ್ಳಿನ ಪದ ಕಾರ್ಯಕ್ರಮಗಳು, ೭ ರಂದು ಸಂಜೆ ೪ಕ್ಕೆ ರಥೋತ್ಸವ, ರಾತ್ರಿ ೯ಕ್ಕೆ ೧೦೧ ಊರುಗಳ ವಾಲಗ ಮೇಳದವರಿಂದ ವಾಲಗ, ೮ ರಂದು ಬೆಳಗ್ಗೆ ೯ಕ್ಕೆ ದೇವರ ನುಡಿಗಳು, ೧೧ಕ್ಕೆ ’ಓಪನ್ ಟಗರಿನ ಕಾಳಗ’, ಮಧ್ಯಾಹ್ನ ೧ಕ್ಕೆ ಭಜನೆಗಳೊಂದಿಗೆ ಅಂಬಲಿ ಬಿಂದಿಗೆ ತರುವುದು, ೩ಕ್ಕೆ ಮಹಾಪ್ರಸಾದ, ೧೦ ಗಂಟೆಗೆ ಅಮಜೇಶ್ವರ ನಾಟ್ಯ ಸಂಘ, ಕಕಮರಿ ಅವರಿಂದ ’ಶ್ರೀ ಜಗಜ್ಯೋತಿ ಬಸವೇಶ್ವರ ಮಹಾತ್ಮೆ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿವೆ.

Home add -Advt

Related Articles

Back to top button