Latest

ಹುಣಶ್ಯಾಳ ಪಿಜಿಯಲ್ಲಿ ಸಾಧನ ಸಂಭ್ರಮ ಸಮಾವೇಶ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಗೋಕಾಕ ತಾಲೂಕಿನ ಪಿಜಿ ಹುಣಶ್ಯಾಳದ ನಿಜಗುಣ ದೇವರು ಸಿದ್ಧಲಿಂಗ ಕೈವಲ್ಯಾಶ್ರಮ ಸ್ಥಾಪಿಸಿ 25 ವರ್ಷ ಸಂದ ಪ್ರಯುಕ್ತ ಮಂಗಳವಾರ ಸಾಧನ ಸಂಭ್ರಮ ಸಮಾವೇಶ ಏರ್ಪಡಿಸಲಾಗಿತ್ತು.

 ಸಾನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡುತ್ತ, ಪಂಚಪೀಠದ ಪರಂಪರೆಯ, ವಿರಕ್ತಪೀಠ ಪರಂಪರೆಯ ಹಾಗೂ ಅಧ್ವೈತ ಪೀಠದ ಪರಂಪರೆಯ ಗುರುಗಳು ಇಲ್ಲಿ ಸೇರುವ ಮೂಲಕ ಎಲ್ಲ ರೀತಿಯ ಪರಂಪರೆ ಸಾರುವ ಸಮನ್ವಯ ಕೇಂದ್ರವಾಗಿ ಇದು ಹೊರಹೊಮ್ಮಿದೆ. ನಿಜಗುಣ ದೇವರು ಕುಗ್ರಾಮವಾಗಿದ್ದ ಪಿಜಿ ಹುಣಶ್ಯಾಳ ಪರಿಸರವನ್ನು ವ್ಯಸನಮುಕ್ತ ಮತ್ತು ಹಸಿರು ಗ್ರಾಮವನ್ನಾಗಿಸಿದ್ದಾರೆ ಎಂದು ಶ್ಲಾಘಿಸಿದರು. ಅವರ ಆದರ್ಶ ಯುವ ಸ್ವಾಮಿಗಳು ಅಳವಡಿಸಿಕೊಳ್ಳುವಂತಿದೆ ಎಂದೂ ಅವರು ಹೇಳಿದರು. 

ಗದಗದ ಶಿವಾನಂದ ಮಠದ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ತತ್ವಾಮೃತವನ್ನು ಉಣಬಡಿಸುವ ಮೂಲಕ ನಿಜಗುಣ ದೇವರು ಸರ್ವರಿಗೂ ಆದರ್ಶರಾಗಿದ್ದಾರೆ ಎಂದರು.

ಚಿತ್ರದುರ್ಗದ ಕಬೀರಾಶ್ರಮದ  ಶಿವಲಿಂಗ ಸ್ವಾಮಿಗಳು, ಹುಣಶ್ಯಾಳ ಗ್ರಾಮವನ್ನು ವಿಶ್ವದಲ್ಲೆಲ್ಲ ತಲೆ ಎತ್ತುವಂತ ಅಪರೂಪದ ಕಾರ್ಯಕ್ರಮವನ್ನು ನಿಜಗುಣ ದೇವರು ಮಾಡುತ್ತಿದ್ದಾರೆ ಎಂದರು. ಇದೇ ವೇಳೆ ಸದ್ಗುರು ಸಾಮ್ರಾಟ ಸಿಡಿ ಬಿಡುಗಡೆ ಮಾಡಲಾಯಿತು. 

ನಿಜಗುಣ ದೇವರು ಮಾತನಾಡುತ್ತ, ಶಿಷ್ಯರ ಪ್ರೋತ್ಸಾಹ, ಈ ಭಾಗದ ಎಲ್ಲಾ ಗುರುಗಳ ಮಾರ್ಗದರ್ಶನ ಈ ಊರನ್ನು ಸುಂದರವಾಗಿಸಲು ಪ್ರೇರೇಪಣೆಯಾಗಿದೆ ಎಂದರು. ಎಲ್ಲ ಪರಂಪರೆಯ ಸ್ವಾಮಿಗಳು ಒಂದೆಡೆ ಸೇರುವ ಮೂಲಕ ಇದೊಂದು ಅಪರೂಪದ ಕಾರ್ಯಕ್ರಮವೆನಿಸಿತು.

ಕಟಕೋಳ ಎಂ ಚಂದರಗಿ ಹಿರೇಮಠದಿಂದ ವೀರಭದ್ರ ಶಿವಯೋಗಿ ಸ್ವಾಮಿಗಳು ನಿಜಗುಣ ದೇವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿದ್ದರು. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button