Latest

ಹೊಟೆಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಶನಿವಾರ ಖೂಟದಲ್ಲಿರುವ ಹೊಟೆಲ್ಲಿನಲ್ಲಿ ಮಧ್ಯಾನ್ಹ 12 ಗಂಟೆಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದ್ದು ಅಲ್ಲಿಯ ಮಹಿಳಾ ಕೆಲಸಗಾರರ ತುರ್ತು ಕ್ರಮದಿಂದಾಗಿ ಯಾವುದೇ ಅನಾಹುತ ಸಂಭವಿಸಲಿಲ್ಲ.
ಸಿಲಿಂಡರ್ ಖಾಲಿಯಾದಾಗ ಹೊಸ ಸಿಲಿಂಡರ್ ಜೋಡಣೆ ಮಾಡುತ್ತಿದ್ದ ಸಮಯದಲ್ಲಿ ಸಿಲಿಂಡರಿನ ಸ್ಕ್ರೂ ಕಿತ್ತು ಬಂದಿದ್ದರಿಂದ ಒಳಗಿದ್ದ ಗ್ಯಾಸ್ ಹೊರಗೆ ಬರತೊಡಗಿತು.

ಮಹಿಳಾ ಕೆಲಸಗಾರರು ಸಿಲಿಂಡರ್ ಬಾಯನ್ನು ಒತ್ತಿ ಹಿಡಿದರು. ಸಮೀಪವೇ ಇದ್ದ ಒಲೆಗಳನ್ನು ಬಂದ್ ಮಾಡಿದರು. ಹೊಟೆಲ್ ಕಿಡಕಿಗಳನ್ನು ತೆರೆದು ಗ್ಯಾಸ್ ಹೊರಗೆ ಹೋಗಲು ಬಿಟ್ಟರು. ಸಿಬ್ಬಂದಿಯೆಲ್ಲ ಗಾಬರಿಯಿಂದ ಹೊರಗೆ ಓಡಿದರು. ನಂತರ ಸಿಲಿಂಡರ್ ನ್ನು ಹೊರಗೆ ಸಾಗಿಸಲಾಯಿತು.

ಖಡೇಬಜಾರ್ ಪೋಲೀಸರು ಮತ್ತು ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button