Good News -1.50 ಲಕ್ಷ ಜನ ಗುಣಮುಖರಾಗಿದ್ದಾರೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೊರೋನಾ ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಆತಂಕದ ಮಧ್ಯೆಯೇ ಶುಭ ಸುದ್ದಿಯೊಂದು ಬಂದಿದೆ.

ಈವರೆಗೆ ವಿಶ್ವದಲ್ಲಿ ಕೊರೋನಾದಿಂದ ಬಳಲುತ್ತಿದ್ದವರ ಪೈಕಿ 1.50 ಲಕ್ಷ ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಒಟ್ಟೂ ಸುಮಾರು 7 ಲಕ್ಷ ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದರು. ಅವರ ಪೈಕಿ 34 ಸಾವಿರದಷ್ಟು ಜನರು ಸಾವನ್ನಪ್ಪಿದ್ದಾರೆ. ಅದರ 5 ಪಟ್ಟು ಜನರು ರೋಗದಿಂದ ಗುಣಮುಖರಾಗಿದ್ದಾರೆ. ಇನ್ನೂ 25 ಸಾವಿರ ಜನರು ಗಂಭೀರಸ್ಥಿತಿಯಲ್ಲಿದ್ದಾರೆ.

ಸೋಮವಾರ ಬಂದಿರುವ ವರದಿಗಳ ಪ್ರಕಾರ ಕರ್ನಾಟಕ ಮತ್ತು ಭಾರತದ ಎಲ್ಲ ಕಡೆ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಏಪ್ರಿಲ್ 15ರ ವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಮುಂದುವರಿದರೆ ಎಲ್ಲರೂ ನಿಟ್ಟುಸಿರು ಬಿಡುವ ಸ್ಥಿತಿ ಬರಬಹುದು. ನಿರ್ಲಕ್ಷ್ಯ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ.

Home add -Advt

Related Articles

Back to top button