ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಚಾಮರಾಜನಗರದಲ್ಲಿ ಸೆಕ್ಯೂರಿಟಿ ಗಾರ್ಡ್ ನಿಂದ ಕಳುವಾಗಿದ್ದ 1 ಕೆಜಿ 192 ಗ್ರಾಂ ಚಿನ್ನಾಭರಣ ಇದೀಗ ನೇಪಾಳದಲ್ಲಿ ಪತ್ತೆಯಾಗಿದೆ.
ಚಾಮರಾಜಪೇಟೆಯ ಸೆಲ್ವರಾಜ್ ಎಂಬುವವರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಸೂರ್ಯ ಬಹದ್ದೂರ್ ಎಂಬಾತ ಚಿನ್ನಾಭರಣವನ್ನು ಕಳುವು ಮಾಡಿ, ನೆಪಾಳಕ್ಕೆ ಪರಾರಿಯಾಗಿದ್ದ. ಈ ಬಗ್ಗೆ ಸೆಲ್ವರಾಜ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಸೂರ್ಯನನ್ನು ನೇಪಾಳದಲ್ಲಿ ಬಂಧಿಸಿದ್ದಾರೆ. ನೇಪಾಳದಲ್ಲಿ ಪೊಲೀಸ್ ಪೇದೆ ಆಗಿದ್ದ ಆರೋಪಿ ಸೂರ್ಯನನ್ನು ದುರ್ನಡತೆ ಕಾರಣಕ್ಕೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಬಳಿಕ ಆತ ಬೆಂಗಳೂರಿಗೆ ಬಂದು ಸೆಲ್ವರಾಜ್ ನಿವಾಸದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ