National

*ಆರ್ ಬಿ ಐ ಗವರ್ನರ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ರಿಸರ್ವ್ ಬ್ಯಾಂಕ್ (RBI)ನ 26 ನೇ ಗವರ್ನರ್ ಆಗಿ ಸಂಜಯ್‌ ಮಲ್ಹೋತ್ರಾ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10 ರಂದು ಕೊನೆಗೊಂಡ ನಂತರ ತೆರವಾದ ಆರ್‌ಬಿಐ ಗವರ್ನರ್ ಸ್ಥಾನವನ್ನು ಸಂಜಯ್‌ ಮಲ್ಹೋತ್ರಾ ವಹಿಸಿಕೊಂಡಿದ್ದಾರೆ.

ಇಂದಿನಿಂದ ತಮ್ಮ ಮೂರು ವರ್ಷಗಳ ಅವಧಿಯನ್ನು ಪ್ರಾರಂಭಿಸುತ್ತಿರುವ ಮಲ್ಹೋತ್ರಾ, ಸೆಂಟ್ರಲ್ ಬ್ಯಾಂಕ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಸತತ ಎರಡನೇ ವೃತ್ತಿಜೀವನದ ನಾಗರಿಕ ಸೇವಕರಾಗಿದ್ದಾರೆ. ಈ ಹಿಂದೆ ಕಂದಾಯ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಮಲ್ಹೋತ್ರಾ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಬಡ್ಡಿ ದರ ಇಳಿಕೆಯಾಗಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button