*ಫಾರೆಕ್ಸ್ ಟ್ರೇಡಿಂಗ್‌ನಲ್ಲಿ 40 ಲಕ್ಷ ನಷ್ಟ*: *ಬೆಳಗಾವಿಯಲ್ಲಿ ವ್ಯಕ್ತಿ ಆತ್ಮಹತ್ಯೆ* *ಮಹಿಳೆ ವಿರುದ್ಧ ದೂರು*

“ಫಾರೆಕ್ಸ್ ಟ್ರೇಡಿಂಗ್‌ನಲ್ಲಿ 40 ಲಕ್ಷ ನಷ್ಟ: ಬೆಳಗಾವಿಯಲ್ಲಿ ವ್ಯಕ್ತಿ ಆತ್ಮಹತ್ಯೆ, ಮಹಿಳೆ ವಿರುದ್ಧ ದೂರು”
ಪ್ರಗತಿವಾಹಿನಿ ಸುದ್ದಿ,
ಬೆಳಗಾವಿ: ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡು, ಮನೊಂದು ಬೆಳಗಾವಿಯ 42 ವರ್ಷದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಸಂಬಂಧ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಮೃತನನ್ನು ಮಹೇಶ ಶಂಕರ ನಾಡಗೌಡ ವಯಸ್ಸು 42, ಉದ್ಯೋಗ: ಬಿಸಿನೆಸ್, ನಿವಾಸ: ಅನಗೋಳ, ಭಾಗ್ಯನಗರ, 1ನೇ ಕ್ರಾಸ್, ಮಹಡಿ ಸಿದ್ದಕಲಾ ಅಪಾರ್ಟ್‌ಮೆಂಟ್, ಬೆಳಗಾವಿ ಎಂದು ಗುರುತಿಸಲಾಗಿದೆ.
ದಿನಾಂಕ 19/03/2026 ರಂದು ಬೆಳಗ್ಗೆ 8:30 ರಿಂದ 23/03/2026 ರಂದು ಬೆಳಗ್ಗೆ 8:00 ರ ನಡುವೆ ಮಹೇಶ ಅವರು ತಮ್ಮ ಮನೆಯ ಹಾಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?
ಮೃತನ ಅಣ್ಣ ಉಮೇಶ ಶಂಕರ ನಾಡಗೌಡ ಅವರು ನೀಡಿದ ದೂರಿನ ಪ್ರಕಾರ, ಮಹೇಶ ಅವರು ಬೃಂದಾ ಪ್ರಾಚಿ ಕಾಳೆ ಎಂಬ ಮಹಿಳೆಯನ್ನು ನಂಬಿ Forex Trading ನಲ್ಲಿ ರೂ. 40,76,000 ಹೂಡಿಕೆ ಮಾಡಿದ್ದರು. ಹೆಚ್ಚಿನ ಲಾಭದ ಆಸೆ ತೋರಿಸಿ ಹಣ ತೆಗೆದುಕೊಂಡಿದ್ದ ಮಹಿಳೆ, ನಂತರ ಹಣ ಮತ್ತು ಲಾಭವನ್ನು ವಾಪಸ್ ಕೊಡಲಿಲ್ಲ.
ಆರ್ಥಿಕ ನಷ್ಟದಿಂದ ಮಾನಸಿಕವಾಗಿ ನೊಂದಿದ್ದ ಮಹೇಶ, ದಿನಾಂಕ 19/03/2026 ರಂದು ಮಹಿಳೆಗೆ ಮೊಬೈಲ್‌ನಲ್ಲಿ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆ. ಅದರಲ್ಲಿ
“You just finished my life, I am going to die & I kept a letter on your name, Because of you I am ending my life. Because of you this all has happened” ಎಂದು ಬರೆದಿದ್ದರು.
ಪ್ರಕರಣ ದಾಖಲು:
ಈ ಸಂಬಂಧ ಉಮೇಶ ನಾಡಗೌಡ ಅವರು 04/07/2026 ರಂದು ತಿಲಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಅಪರಾಧ ಸಂಖ್ಯೆ: 79/2026, ಕಲಂ: 108 BNS-2023 ಮತ್ತು 66(C) & 66(D) IT ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



