ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಮತ್ತೊಂದು ಕೊರೋನಾ ಪ್ರಕರಣ ದೃಢಪಟ್ಟಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 18ಕ್ಕೇರಿದೆ.
ರಾಜ್ಯದಲ್ಲಿ ಇಂದು 11 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ 258ಕ್ಕೇರಿದೆ. 9 ಜನರು ಸಾವನ್ನಪ್ಪಿದ್ದಾರೆ.
ಇಂದು ಬಾಗಲಕೋಟೆ ಮತ್ತು ಕಲಬುರ್ಗಿಯಲ್ಲಿ ತಲಾ 3 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 2, ಚಿಕ್ಕಬಳ್ಳಾಪುರ, ಬೆಳಗಾವಿ ಹಾಗೂ ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಇಂದು ದಾಖಲಾಗಿದೆ.
ಬೆಳಗಾವಿಯಲ್ಲಿ ದೃಢಪಟ್ಟಿರುವ 33 ವರ್ಷದ ಪುರುಷ ದೆಹಲಿಗೆ ಹೋಗಿ ಬಂದಿದ್ದ ಎನ್ನುವುದು ಗೊತ್ತಾಗಿದೆ. ಆದರೆ ಆತ ಯಾವ ಪ್ರದೇಶದವನು ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿರುವ ಎಲ್ಲ 18 ಪ್ರಕರಣಗಳೂ ದೆಹಲಿಗೆ ಹೋಗಿ ಬಂದಿರುವ, ಇಲ್ಲವೇ ಅವರೊಂದಿಗೆ ಸಂಪರ್ಕ ಹೊಂದಿದವರದ್ದೇ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ