ಪ್ರಗತಿವಾಹಿನಿ ಸುದ್ದಿ: ತುರ್ತು ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕೆ ಇಟ್ಟು ಜನರ ಪ್ರಾಣ ರಕ್ಷಣೆ ಮಾಡುವ 108 ಅಂಬುಲೆನ್ಸ್ ನೌಕರರು ಇದೀಗ ಆಕ್ರೋಶಗೊಂಡಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ ಎಂದು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ನವೆಂಬರ್ 16ರ ರಾತ್ರಿ 8 ಗಂಟೆಯ ಒಳಗಾಗಿ ಮೂರು ತಿಂಗಳ ಸಂಪೂರ್ಣ ವೇತನ ಪಾವತಿ ಆಗದೇ ಹೋದರೆ ನವೆಂಬರ್ 16ರ ರಾತ್ರಿ 8:00 ಗಂಟೆಯ ನಂತರ ಸಂಪೂರ್ಣ ಮೂರು ತಿಂಗಳ ವೇತನ ಪಾವತಿ ಆಗುವವರೆಗೂ ಎಲ್ಲಾ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದುಕೊಂಡು ಯಾವುದೇ ತುರ್ತು ಸೇವೆಯನ್ನು ನೀಡದೆ ಅಂಬುಲೆನ್ಸ್ ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.
ಆರೋಗ್ಯ ಕವಚ ಯೋಜನೆಯಲ್ಲಿ ಸುಮಾರು ಎರಡು ವರ್ಷಗಳಿಂದ ವೇತನದ ಸಮಸ್ಯೆಯಾಗುತ್ತಿದೆ. ಹಲವು ಬಾರಿ ಸರ್ಕಾರ ಮತ್ತು ಸಂಸ್ಥೆ ಹಾಗೂ ಸಂಘಟನೆಗಳು ಸಭೆ ಮಾಡಿದರೂ ಸಹ ವೇತನದ ಸಮಸ್ಯೆ ಬಗೆಹರಿದಿಲ್ಲ. ಇದೀಗ ಕಳೆದ ಮೂರು ತಿಂಗಳುಗಳಿಂದ ವೇತನವಿಲ್ಲದೇ ಜನರ ಪ್ರಾಣ ಉಳಿಸುತ್ತಿರುವ ಅಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ