ಪ್ರಗತಿ ವಾಹಿನಿ ಸುದ್ದಿ, ಗುರುಗ್ರಾಮ: ಗುರುಗ್ರಾಮದಲ್ಲಿ 11 ವಿದೇಶಿ ತಳಿಯ ನಾಯಿಗಳನ್ನು ಸಾಕುವುದಕ್ಕೆ ಗ್ರಾಹಕರ ನ್ಯಾಯಾಲಯ ನಿಷೇಧ ಹೇರಿದೆ.
ಗುರುಗ್ರಾಮದಲ್ಲಿ ಕಳೆದ ಆ.8 ರಂದು ಮಹಿಳೆಯೊಬ್ಬರ ಮೇಲೆ ನಡೆದ ಭೀಕರ ನಾಯಿ ದಾಳಿಯ ಬಳಿಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಗುರು ಗ್ರಾಮದಲ್ಲಿ ಆಗಸ್ಟ್ ತಿಂಗಳಲ್ಲಿ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಮುನ್ನಿ ಎಂಬ ಮಹಿಳೆಯ ಮೇಲೆ ನಾಯಿಗಳು ಭೀಕರವಾಗಿ ದಾಳಿ ನಡೆಸಿದ್ದವು. ಗಂಭೀರವಾಗಿ ಗಾಯಗೊಂಡ ಮಹಿಳೆ ನಾಯಿಯ ಮಾಲೀಕರ ಮೇಲೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ವಿದೇಶಿ ತಳಿಯ ಪಿಟ್ ಬುಲ್, ಡೋಗೊ ಅರ್ಜೆಂಟಿನೋ, ರಾಟ್ ವೀಲರ್, ನಿಯೋಪೊಲಿಟನ್ ಮಾಸ್ಟಿಫ್, ಪ್ರೆಸಾ ಕನೆರಿಯೋ, ವೂಲ್ಫ್ ಡಾಗ್, ಅಮೇರಿಕನ್ ಬುಲ್ ಡಾಗ್ ಸೇರಿದಂತೆ 11 ತಳಿಯ ನಾಯಿಗಳನ್ನು ಸಾಕುವುದಕ್ಕೆ ನಿಷೇಧ ಹೇರಿದೆ.
ಅಲ್ಲದೇ, ಇತರ ತಳಿಯ ನಾಯಿಗಳನ್ನು ಸಾಕುವುದಕ್ಕೂ ಸಹ ಸೂಕ್ತ ಪರವಾನಗಿ ಪಡೆಯಬೇಕು, ನಾಯಿಗಳನ್ನು ವಾಕಿಂಗ್ ಕರೆದೊಯ್ಯುವಾಗ ಅದಕ್ಕೆ ಮಾಸ್ಕ್ ತೊಡಿಸಬೇಕು ಎಂಬ ಆದೇಶ ನೀಡಿದೆ.
ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣದಲ್ಲಿ ಬದಲಾದ ಗುಂಬಜ್ ಮಾದರಿಯ ಬಸ್ ನಿಲ್ದಾಣ; ದಿನಕ್ಕೊಂದು ಸ್ವರೂಪದಲ್ಲಿ ತಂಗುದಾಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ