Latest

ಕರ್ನಾಟಕದಲ್ಲೂ16 ಕೋಟಿ ರೂ. ಖಾಯಿಲೆಯ ಮಗು; ಸಹಾಯಕ್ಕಾಗಿ ಹೆತ್ತವರ ಮನವಿ

ಮುಂಬೈಯಲ್ಲಿ ಟೀರಾ ಕಾಮತ್ ಎನ್ನುವ 5 ತಿಂಗಳ ಕಂದಮ್ಮನಿಗೆ ಅಂಟಿದಂತಹ ರೋಗವೇ ಕರನಾಟಕದಲ್ಲೂ 11 ತಿಂಗಳ ಮಗುವಿಗೆ ಅಂಟಿದೆ. ಮುಂಬೈ ಮಗುವಿನ ಚಿಕಿತ್ಸೆಗ ಕ್ಲೌಡ್ ಫಂಡಿಂಗ್ ಮೂಲಕ 16 ಕೋಟಿ ರೂ ಸಂಗ್ರಹವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆ ಮಗುವಿನ ಔಷಧಿಯ 6 ಕೋಟಿ ರೂ. ತೆರಿಗೆ ಮನ್ನಾ ಮಾಡಿದ್ದಾರೆ. ಕರ್ನಾಟಕದ ಮಗುವಿಗೆ ನೆರವಿನ ನಿರೀಕ್ಷೆಯಲ್ಲಿ ಹೆತ್ತವರಿದ್ದಾರೆ. ಓದಿ ಈ ಸ್ಟೋರಿ…

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಕ್ಕಳಿಲ್ಲದ ತಂದೆ-ತಾಯಿಗೆ ತಮಗೊಂದು ಮಗುವಿಲ್ಲವಲ್ಲ ಎಂಬ ನೋವು, ಸಂಕಟ… ಆದರೆ ಮುದ್ದಾದ ಮಗುವನ್ನು ಕೊಟ್ಟು ಅದರೊಂದಿಗೆ ಜೀವವನ್ನೇ ಹಿಂಡುವ ಕಾಯಿಲೆಯನ್ನೂ ದೇವರು ಕೊಟ್ಟುಬಿಟ್ಟರೆ ಬದುಕಿನ ಜಂಗಾಬಲವೇ ಉಡುಗಿಹೋಗುವ ಸ್ಥಿತಿ…

ಮನೆಯಲ್ಲಿ ತುಂಟಾಟ ಆಡುತ್ತಾ, ಮುದ್ದು ಮುದ್ದಾದ ಮಾತುಗಳಿಂದ ಎಲ್ಲರನ್ನು ರಂಜಿಸುತ್ತಾ, ಹೆತ್ತವರ ನೋವು ಮರೆಸಬೇಕಿದ್ದ ಮಗು ವೈದ್ಯಲೋಕಕ್ಕೇ ಸವಾಲಾಗುವಂಥಹ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರೆ…

ಒಂದೆಡೆ ಕಂದಮ್ಮ ಕ್ಷಣ ಕ್ಷಣಕ್ಕೂ ನೋವಲ್ಲಿ ಹೋರಾಡುತ್ತಿದ್ದರೆ, ಮತ್ತೊಂದೆಡೆ ಮಗುವನ್ನು ಉಳಿಸಿಕೊಳ್ಳಲೆಂದು ಹೆತ್ತವರು ಪರದಾಡುವ ಸ್ಥಿತಿ… ನಿಜಕ್ಕೂ ಕಲ್ಲು ಹೃದಯವೂ ಕೂಡ ಕರಗುವಂತಿದೆ ಈ ಮುದ್ದು ಮಗುವಿನ ಕರುಣಾಜನಕ ಕಥೆ.

ಹೌದು. ಬೆಂಗಳೂರಿನ ಸಂಜೀವಿನಿ ನಗರದ ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಜ್ಯೋತಿ ದಂಪತಿಯ ಪುತ್ರ ಜನೀಶ್ 11 ತಿಂಗಳ ಕಂದ. ಜನೀಶ್ ಜೀನ್ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ-ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಂತಹ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾನೆ.

ವಿಶ್ವದಲ್ಲಿಯೇ ಅತ್ಯಪರೂಪದ ಕಾಯಿಲೆ ಇದಾಗಿದ್ದು, ಜನೀಶ್ ನನ್ನು ಉಳಿಸಿಕೊಳ್ಳಬೇಕಾದರೆ ಬರೋಬ್ಬರಿ 16 ಕೋಟಿ ರೂ.ಔಷಧಿಯ ಅಗತ್ಯವಿದೆ. ಅದು ಕೂಡ ಅಮೆರಿಕಾದಿಂದ ತರಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಆರ್ಥಿಕವಾಗಿಯೂ ಸಂಕಷ್ಟದಲ್ಲಿರುವ ಜನೀಶ್ ತಂದೆ-ತಾಯಿ ಇದೀಗ ತಮ್ಮ ಮುದ್ದು ಮಗನನ್ನು ಉಳಿಸಿಕೊಳ್ಳಲು ಹೋರಾಟನಡೆಸಿದ್ದಾರೆ.

ಈ ವಿಚಿತ್ರ ರೋಗದಿಂದ ಬಳಲುತ್ತಿರುವ ಜನೀಶ್ ಗೆ ದೇಹದ ಯಾವುದೇ ಅಂಗಾಂಗ ಕೆಲಸ ಮಾಡುವುದಿಲ್ಲ. ಉಸಿರಾಡಲು ಕಷ್ಟವಿದೆ. ಆಹಾರ ಸೇವಿಸುವುದು ಸಾಧ್ಯವಿಲ್ಲ. ಸಧ್ಯ ಜನೀಶ್ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವನ್ನು ಉಳಿಸಿಕೊಳ್ಳಲು ತಂದೆ-ತಾಯಿ ಹೃದಯವಂತರು ಸಹಾಯ ಮಾಡುವಂತೆ ಮೊರೆಯಿಟ್ಟಿದ್ದಾರೆ.

ಹೆಸರು -Jyothi
Bank-indian overseas bank
Ac no-374201000000285
Ifce code-IOBA0003742
Sahakar Nagar Branch, Bangalore
Phone pay -9611789719

 

ಟೀರಾ ಕಾಮತ್ ಔಷಧಿ ಮೇಲಿನ ತೆರಿಗೆ ಮನ್ನಾಗೆ ಪ್ರಧಾನಿ ಸಮ್ಮತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button