Latest

ಸ್ವಿಚ್ ಬೋರ್ಡ್ ಮೇಲೆ ಕೈಯಿಟ್ಟ ಮಗು ಕರೆಂಟ್ ಶಾಕ್ ಹೊಡೆದು ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಸಹೋದರಿ ಮಗುವಿನ ಹುಟ್ಟುಹಬ್ಬಕ್ಕೆಂದು ತವರು ಮನೆಗೆ ಬಂದಿದ್ದಾಗ ಘೋರ ದುರಂತವೊಂದು ಸಂಭವಿಸಿದೆ. ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗು ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಚಾಮರಾಜನಗರದ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ.

ಸಹೋದರಿ ಮಗುವಿನ ಹುಟ್ಟುಹಬ್ಬಕ್ಕೆಂದು ಹೊಸಕೇರಿ ನಿವಾಸಿ ಲಕ್ಷ್ಮಿ ತನ್ನ 11 ತಿಂಗಳ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದಳು. ಈ ವೇಳೆ ನೆಲದ ಮೇಲೆ ಇಟ್ಟಿದ್ದ ಸ್ವಿಚ್ ಬೋರ್ಡ್ ಗೆ ಲಕ್ಷಿಯ ಮಗು ಕೈ ಹಾಕಿದೆ. ವಿದ್ಯುತ್ ಶಾಕ್ ಹೊಡೆದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಗುವನ್ನು ರಕ್ಷಿಸಲು ಹೋದ ತಾಯಿ ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ.

Home add -Advt

ಲಕ್ಷ್ಮಿ ಹಾಗೂ ರಂಗಸ್ವಾಮಿ ದಂಪತಿಯ 11 ತಿಂಗಳ ಕಂದ ಮೃತ ಮಗು. ಗಾಯಾಳು ಲಕ್ಷ್ಮಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಪಾಳಕ್ಕೆ ಹೊಡೆದು ಮಾನಸಿಕ ಅಸ್ವಸ್ಥ ವೃದ್ಧನನ್ನನ್ನೇ ಕೊಂದ ಬಿಜೆಪಿ ಮುಖಂಡ

Related Articles

Back to top button