Belagavi NewsBelgaum NewsCrimeKannada NewsKarnataka NewsLatestNationalPolitics

*ಗಾಂಜಾ ಸೇವನೆ ಮಾಡುತ್ತಿದ್ದ 11 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.‌

ಗೋಕಾಕ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕಿರಣ ಎಸ್ ಮೋಹಿತೆ ನೇತೃತ್ವದಲ್ಲಿ ದಾಳಿ ನಡೆದಿದೆ.

ಗೋಕಾಕ ನಗರದ ಚಿಕ್ಕೋಳಿ ಬ್ರಿಡ್ಜ್ . ತಂಬಾಕೆ ಗೋಡಾವನ್, ಎಪಿಎಮ್ಸಿ, ಜಿ.ಆರ್.ಬಿ.ಸಿ, ವಾಲ್ಮೀಕಿ ಮೈದಾನದ ಹತ್ತಿರ ವಿವಿಧ ಸಾರ್ವಜನಿಕ ಸ್ಥಳದಲ್ಲಿ ದಾಳಿ ಮಾಡಿದ್ದು ದಾಳಿ ಕಾಲಕ್ಕೆ ಗಾಂಜಾ ಸೇವನೆ ಮಾಡುತ್ತಿದ್ದ 11 ಜನ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಎಲ್ಲರೂ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢವಾಗಿದೆ.

ಆರೋಗಳ ಮೇಲೆ ಗೋಕಾಕ ಶಹರ ಪಿ.ಎಸ್ ನಲ್ಲಿ ಅಪರಾಧ ಸಂಖ್ಯೆ: 28/2026 ಕಲಂ 20 (ಬಿ) (ii)(A )ಎನ್.ಡಿ.ಪಿ.ಎಸ್ ಕಾಯ್ದೆ 1985 ನೇದ್ದರಲ್ಲಿ ಒಟ್ಟು 5 ಪ್ರಕರಣಗಳನ್ನು ದಾಖಲಿಸಿ ಆರೋಪಿತರ ಮೇಲೆ ಕ್ರಮ ಕೈಗೊಂಡಿದ್ದು ಇರುತ್ತದೆ.

Home add -Advt

ಗಾಂಜಾ ಮಾರಾಟ ಮಾಡಿದ ಆರೋಪಿ ಅಲಿಖಾನ್ ಇಸ್ಮಾಯಿಲ್ ಶಬಾಶ್‌ ಖಾನ್ ಎಂಬಾತನ್ನು ಬಂಧಿಸಲಾಗಿದೆ. 

ಗಾಂಜಾ ಸೇವಿಸಿದ ಆರೋಪಿಗಳಾದ  ಸಂದೀಪ ಅಶೋಕ ಮಾದರ (20), ಪ್ರಶಾಂತ ರಮೇಶ ಉದ್ದನಾಯಿಕ (22), ಗಣೇಶ ಮಾರುತಿ ಹೆಳವಗೋಳ (25) ದೀಪಕ ಅಪ್ಪಣ್ಣ ಸಾಳುಂಕೆ (28), ಪ್ರಜ್ವಲ ಲಕ್ಕಪ್ಪ ಗಮಾಣಿ (18)  ದತ್ತು ಜಗನ್ನಾಥ ಶಿಂಧೆ ವಯಸ್ಸು (20), ಮೀರಾಸಾಬ ರಫೀಕ ದೇವಡಿ (22), ವಿಶಾಲ ಸುರೇಶ ಕಲಾಲ (30), ವಿಶಾಲ ಮುತ್ತೆಪ್ಪಗೋಳ  (26), ಮಲ್ಲಿಕಜಾನ ದಸ್ತಗೀರಸಾಬ ಶೇಖ (26) ಹಾಗೂ ಫಯಾಜ್ ರಾಜೇಸಾಬ ನಧಾಫ್ (25) ಬಂದಿತರು. 

Related Articles

Back to top button