Latest

ತಂದೆಯ ಆತ್ಮೀಯ ಸ್ನೇಹಿತ ಎಂದು 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಮುಂಬೈ: ತಂದೆಯ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡು ಶಾಲಾ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.

11 ವರ್ಷದ ಬಾಲಕಿ ಮೇಲೆ ದುರುಳ ಶಾಲೆಯ ವಾಶ್ ರೂಮಿನಲ್ಲಿ ಅತ್ಟಹಾಸ ಮೆರೆದಿದ್ದಾನೆ. ಘಟನೆ ನಡೆದ 10 ಗಂಟೆಯೊಳಗೆ ಆರೋಪಿ ಮಂಗೇಶ್ ಪದಮುಲು ಎಂಬಾತನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

Home add -Advt

ಘಟನೆ ನಡೆದ ಬೆನ್ನಲ್ಲೇ ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಪತ್ತೆಗಾಗಿ ಪೊಲೀರು 5 ತಂಡವನ್ನು ರಚಿಸಿದ್ದರು. ಶಾಲೆ ಬಳಿ ಸ್ಥಳೀಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯನ್ನು ಪ್ರಶ್ನಿಸುತ್ತಿದ್ದ ಬಗ್ಗೆ ಗಮನಕ್ಕೆ ಬಂದಿದೆ. ಆತನ ಸ್ಕೆಚ್ ಮಾಡಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಬಾಲಕಿ ಶಾಲೆಯಲ್ಲಿರುವುದನ್ನು ಗಮನಿಸಿದ ವ್ಯಕ್ತಿ ಆಕೆಯನ್ನು ಮೂಲೆಗೆ ತಳ್ಳಿ ಬೆದರಿಕೆಯೊಡ್ಡಿದ್ದಾನೆ ಅಲ್ಲದೇ, ತಾನು ನಿನ್ನ ತಂದೆಯ ಆತ್ಮೀಯ ಸ್ನೇಹಿತ ಎಂದು ಹೇಳಿದ್ದಾನೆ ಬಳಿಕ ಬಾಲಕಿಯನ್ನು ಶೌಚಾಲಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಬೆಳಗಾವಿ; ಪತ್ನಿಯನ್ನು ಸಾರ್ವಜನಿಕರ ಎದುರೆ ನಡು ರಸ್ತೆಯಲ್ಲಿ ಕೊಚ್ಚಿಹಾಕಿದ ಪತಿ

Related Articles

Back to top button