Kannada NewsLatest

ಬೆಳಗಾವಿ; ಪತ್ನಿಯನ್ನು ಸಾರ್ವಜನಿಕರ ಎದುರೆ ನಡು ರಸ್ತೆಯಲ್ಲಿ ಕೊಚ್ಚಿಹಾಕಿದ ಪತಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಪತ್ನಿಯನ್ನು ಪತಿ ನಡು ರಸ್ತೆಯಲ್ಲೇ ಕೊಚ್ಚಿ ಕೊಲೆಗೈದ ಘಟನೆ ಬೆಳಗಾವಿಯ ಕೋಟೆ ಕೆರೆ ಬಳಿ ನಡೆದಿದೆ.

Home add -Advt

ಹೀನಾ ಕೌಸರ್ (24) ಕೊಲೆಯಾದ ಮಹಿಳೆ. ಹೀನಾ ಕೌಸರ್ 4 ವರ್ಷಗಳ ಹಿಂದೆ ಮಂಜೂರ್ (34) ಎಂಬಾತನನ್ನು ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹದಿಂದಾಗಿ ನೊಂದು 8 ತಿಂಗಳ ಹಿಂದೆ ಹೀನಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.

ವಿಚ್ಛೇದನ ನೀಡಲು ನಿರಾಕರಿಸಿದ್ದ ಪತಿ ಮಂಜೂರ್, ವಿಚ್ಛೇದನ ಕೊಡದಂತೆ ಹೇಳಿದ್ದ. ಆದರೆ ಇದಕ್ಕೆ ಹೀನಾ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಕೋಪಗೊಂಡಿದ್ದ ಮಂಜೂರ್, ಇಂದು ಪತ್ನಿ ಕೋರ್ಟ್ ನಿಂದ ವಾಪಸ್ ಬರುತ್ತಿದ್ದಾಗ ಲೇಕ್ ವ್ಯೂವ್ ಆಸ್ಪತ್ರೆ ಬಳಿ ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರೇ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಲ್ಲಿ ಬಿದ್ದಿದ್ದ ಹೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಂತರ ಮಚ್ಚನ್ನು ಹಿಡಿದುಕೊಂಡು ಬಂದವರಿಗೆಲ್ಲ ವಿವರಣೆ ನೀಡುತ್ತಿದ್ದ. ಜನರೇ ಮಚ್ಚನ್ನು ಚೀಲದೊಳಗೆ ಹಾಕಿಕೊಳ್ಳುವಂತೆ ಹೇಳಿದ ನಂತರ ಆತ ಕೈಯಲ್ಲಿದ್ದ ಚೀಲದೊಳಗೆ ತುಂಬಿದ. ರಸ್ತೆಯಲ್ಲಿ ಜನದಟ್ಟಣೆ ತುಂಬಿಕೊಂಡಿತ್ತು. ಜನ ಹಾಗೂ ವಾಹನ ಸಂಚಾರದಿಂದ ತುಂಬಿಕೊಂಡಿತ್ತು.

ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. (ವಿಡೀಯೋ ಭೀಕರವಾಗಿರುವುದರಿಂದ ಪ್ರಗತಿವಾಹಿನಿ   ಪ್ರಕಟಿಸಿಲ್ಲ)

ಆರೋಪಿ ಪತಿ ಮಂಜೂರ್ ನನ್ನು ಮಾಳಮಾರುತಿ ಠಾಣೆ ಪೊಲಿಸರು ಬಂಧಿಸಿದ್ದಾರೆ.

ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ಕಾರು ಅಪಘಾತ; ಓರ್ವನ ದುರ್ಮರಣ, ಮೂವರಿಗೆ ಗಾಯ

Related Articles

Back to top button