Latest

12 ಲಕ್ಷ ರೂ. ಮೌಲ್ಯದ ಅಕ್ಕಿ ವಶ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಮೇಲೆ ದಾಳಿ ನಡೆಸಿದ ಬೆಳಗಾವಿಯ ಸಿಸಿಬಿ  ಇನ್ಸಪೆಕ್ಟರ್  ಗುರುರಾಜ ಕಲ್ಯಾಣಶೆಟ್ಟಿ ಹಾಗೂ ತಂಡ  ಇಬ್ಬರನ್ನು ಬಂಧಿಸಿ, ಟ್ರಕ್ ಸೇರಿದಂತೆ ಸುಮಾರು 12 ಲಕ್ಷ ರೂ. ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆದಿದೆ.  

ಇಂದು  ಮಧ್ಯಾಹ್ನ ಟಿಳಕವಾಡಿ ಠಾಣೆಯ ಜಟಪಟ ಕಾಲನಿಯಲ್ಲಿ ಸರ್ಕಾರಿ ಪಡಿತರ ಅಕ್ಕಿ ಚೀಲಗಳನ್ನು ಒಂದು ಗೋದಾಮಿನಲ್ಲಿ ಕೂಡಿಟ್ಟು, ಅವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದಿತ್ಮಾತು.

ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹಾಗೂ  ಅಪರಾಧ ಮತ್ತು ಸಂಚಾರ ಡಿಸಿಪಿ ಮತ್ತು ಎಸಿಪಿ ಮಹಾಂತೇಶ್ವರ ಜಿದ್ದಿ  ಅವರ ಮಾರ್ಗದರ್ಶನದಲ್ಲಿ ಜಿ.ಐ ಕಲ್ಯಾಣಶೆಟ್ಟಿ, ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ತಂಡದಲ್ಲಿ  ಎಚ್.ಎಸ್ ನಿಸುನ್ನವರ, ಶ್ರೀಧರ ಭಜಂತ್ರಿ, ಯಾಸೀನ ನದಾಫ,  ಸುನೀಲ ಬಾಗಲಕೋಟ ಇದ್ದರು.   

ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮತ್ತು ಸಾಗಾಟದಲ್ಲಿ ತೊಡಗಿದ್ದ ಜಟಪಟ ಕಾಲನಿಯ ಶೇಖರ ವಿಶ್ವನಾಥ ಕಬಟೆ  ಮತ್ತು ವಾಹನ ಚಾಲಕ/ಮಾಲೀಕ ಕೊಲ್ಲಾಪುರದ  ಕಿರಣ ದಿಲೀಪ ಪಾಟೀಲ  ಇವರನ್ನು ಹಾಗೂ ಸುಮಾರು ೧೨ ಲಕ್ಷ ಮೌಲ್ಯದ ಅಕ್ರಮ ಪಡಿತರದ ಸುಮಾರು ೬೦೦ ಚೀಲ ಅಕ್ಕಿ ಸಮೇತ ಸಾಗಾಟ ಮಾಡಲು ಬಳಸುತ್ತಿದ್ದ ಟ್ರಕ್ (ನಂ. ಎಂ.ಎಚ್-೦೯/ಎಲ್-೪೪೧೭) ವಶಕ್ಕೆ ಪಡೆಯಲಾಯಿತು.

 ಆರೋಪಿಗಳ ವಿರುದ್ದ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button