ಪ್ರಗತಿವಾಹಿನಿ ಸುದ್ದಿ, ತಿರುವನಂತಪುರಂ – ಕೇರಳ ಸರಕಾರದ ತಿರುವೋಣಂ (Onam) ಲಾಟರಿಯ ಬಂಪರ್ ಬಹುಮಾನ ರಿಕ್ಷಾ ಚಾಲಕರೊಬ್ಬರಿಗೆ ಬಂದಿದೆ.
ಗಣೇಶ ಚತುರ್ಥಿಯ ದಿನ ರಿಕ್ಷಾ ಚಾಲಕ ಜಯಪಾಲನ್ 300 ರೂ. ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದ. ಇದೀಗ ಫಲಿತಾಂಶ ಪ್ರಕಟವಾಗಿದ್ದು ಬಂಪರ್ ಬಹುಮಾನ ಬಂದಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಮರಡು ನಿವಾಸಿ 58 ವರ್ಷದ ಆಟೋ ರಿಕ್ಷಾ ಚಾಲಕ ಜಯಪಾಲನ್ ಪಿ ಆರ್ ಈ ಬಾರಿಯ ಬಂಪರ್ ಬಹುಮಾನ ವಿಜೇತರು.
ಸಾಲ ಮಾಡಿ ಆಟೋ ಖರೀದಿಸಿ ಓಡಿಸುತ್ತಿದ್ದ ಜಯಪಾಲನ್ ಇಎಂಐ ಕಟ್ಟಲು ಪರದಾಡುವ ಸ್ಥಿತಿ ಇತ್ತು. ಇದೀಗ ತೆರಿಗೆ ಕಳೆದು ಸುಮಾರು 7 ಕೋಟಿ ರೂ. ಅವರ ಕೈ ಸೇರಲಿದೆ. ಮೊದಲು ಮನೆ ಸಾಲ, ರಿಕ್ಷಾ ಸಾಲ ತೀರಿಸುವೆ. ಉಳಿದ ಹಣವನ್ನು ಕುಟುಂಬದವರೊಂದಿಗೆ ಚರ್ಚಿಸಿ ಬಳಸುತ್ತೇನೆ ಎಂದು ಜಯಪಾಲನ್ ತಿಳಿಸಿದ್ದಾರೆ.
ಬಡತನದಲ್ಲಿ ಕಾಲ ಕಳೆಯುತ್ತಿದ್ದ ಜಯಪಾಲನ್ ಇದ್ದಕ್ಕಿದ್ದಂತೆ ಕೊಟ್ಯಾಧಿಪತಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ