
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿ ಪೊಲೀಸರು ವಾಹನ ಕಳ್ಳನನ್ನು ಬಂಧಿಸಿ ಸುಮಾರು 4.45 ಲಕ್ಷ ರೂ. ಮೌಲ್ಯದ 12 ಮೋಟರ್ ಸೈಕಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಪೆಟ್ರೋಲಿಂಗ ಮಾಡುತ್ತಿರುವಾಗ ಕಳ್ಳ ಸಿಕ್ಕಿ ಬಿದ್ದಿದ್ದಾನೆ.
ಬೈಲಹೊಂಗಲ ಕಡೆಯಿಂದ ನಂಬರ್ ಪ್ಲೇಟ್ ಇಲ್ಲದ ಕೆಂಪು ಮತ್ತು ಕಪ್ಪು ಬಣ್ಣದ ಹಿರೋ ಹೊಂಡಾ ಡಿಲೆಕ್ಸ್ ಮೋಟಾರ್ ಸೈಕಲ್ ಮೇಲಿಂದ ಒಬ್ಬ ವ್ಯಕ್ತಿ ಬಂದಿದ್ದ. ಅವನು ಪೊಲೀಸ್‌ರನ್ನು ನೋಡಿ ಸಂಶಯಾತ್ಮಕವಾಗಿ ನಡೆದುಕೊಂಡಾಗ ಅವನನ್ನು ನಿಲ್ಲಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬಯಲಾಯಿತು.
ಬೈಲಹೊಂಗಲ ತಾಲೂಕು ತಿಗಡಿಯ ಆಜಾದ ಮೆಹಬೂಬ ಸುಭಾನಿ ಕಿಲ್ಲೇದಾರ ಎನ್ನುವ ಆತನ ವಾಹನದ ದಾಖಲಾತಿಗಳನ್ನು ವಿಚಾರಿಸಿದಾಗ ಸರಿಯಾಗಿ ಉತ್ತರ ನೀಡದೇ ತಪ್ಪು ಮಾಹಿತಿಯನ್ನು ನೀಡಲು ಆರಂಭಿಸಿದಾಗ ಆತನನ್ನು ಠಾಣೆಗೆ ಕರೆದುಕೊಂಡು ಬಂದು ತೀವ್ರ ವಿಚಾರಣೆಗೊಳಪಡಿಸಲಾಯಿತು.
ಸುಮಾರು 15 ದಿವಸಗಳ ಹಿಂದೆ ಬೆಳಗಾವಿಯ ಎ.ಪಿ.ಎಮ್.ಸಿ. ಯಾರ್ಡದಲ್ಲಿ ಈ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಈಗ ಬೆಳಗಾವಿ ನಗರಕ್ಕೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ಒಪ್ಪಿಕೊಂಡ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅವನಿಂದ 2 -ಹಿರೋ ಹೊಂಡಾ, 2 -ಯಮಹಾ & 1 ಅಪ್ಪಾಚಿ ಮೊಟರ್ ಸೈಕಲ್ ಹೀಗೆ ಒಟ್ಟು 1.90 ಲಕ್ಷ ರೂ. ಮೌಲ್ಯದ 5 ಮೋಟರ್ ಸೈಕಲ್‌ಗಳನ್ನು ಜಪ್ತಪಡಿಸಿಕೊಳ್ಳಲಾಗಿತ್ತು.
ತನಿಖೆ ಮುಂದುವರೆಸಿದಂತೆ, ಮತ್ತೆ 2 ಹಿರೋ ಹೊಂಡಾ, 4 -ಹೊಂಡಾ ಶೈನ್ ಮತ್ತು 1 -ಟಿವಿಎಸ್ ಎಕ್ಸಲ್ ಮೊಟರ್ ಸೈಕಲ್ ಹೀಗೆ ಒಟ್ಟು 2.55 ಲಕ್ಷ ರೂ. ಮೌಲ್ಯದ 7 ಮೋಟರ್ ಸೈಕಲ್‌ಗಳನ್ನು ಮತ್ತೆ ಜಪ್ತಪಡಿಸಿಕೊಳ್ಳಲಾಗಿದೆ.
ಹೀಗೆ ಆಜಾದ ಮೆಹಬೂಬಸುಭಾನಿ ಕಿಲ್ಲೇದಾರನಿಂದ ಇಲ್ಲಿಯವರೆಗೆ ಒಟ್ಟು 4.45 ಲಕ್ಷ ರೂ. ಮೌಲ್ಯದ 12 ಮೋಟಾರ್ ಸೈಕಲ್‌ಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಹಾಗೂ ಕಳ್ಳತನ ಮಾಡಿದ ಮೋಟಾರ್ ಸೈಕಲ್‌ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದು, ಅವುಗಳು ಕಳ್ಳತನದ ಮೋಟರ್ ಸೈಕಲ್‌ಗಳು ಎಂದು ಗೊತ್ತಿದ್ದರೂ ಕಡಿಮೆ ಬೆಲೆಗೆ ಮೋಟರ್ ಸೈಕಲ್‌ಗಳನ್ನು ತೆಗೆದುಕೊಂಡಿರುವ ಹಣ್ಣಿಕೇರಿ ಗ್ರಾಮದ ರುದ್ರಪ್ಪಾ ತಿಪ್ಪನ್ನಾ ನಂದಿ, ರುದ್ರಪ್ಪಾ ಯಲ್ಲಪ್ಪಾ ಉದ್ದನ್ನವರ, ಸಿದ್ದಪ್ಪಾ ಫಕೀರಪ್ಪಾ ಯರಗುದ್ದಿ, ನೀಲಪ್ಪಾ ಬಸವಣ್ಣೆಪ್ಪಾ ಜೋಳದ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ