ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 1925 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 1235 ಜನರಿಗೆ ಸೋಂಕು ದೃಢಪಟ್ಟಿದೆ.
ಇದರಿಂದಾಗಿ ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 23,474 ಆಗಿದ್ದು 13251 ಪ್ರಕರಣಗಳು ಸಕ್ರೀಯವಾಗಿವೆ. ಐಸಿಯುನಲ್ಲಿ 243 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟೂ 37 ಜನರು ಸಾವಿಗೀಡಾಗಿದ್ದಾರೆ.
ಇಂದು ದಕ್ಷಿಣ ಕನ್ನಡದಲ್ಲಿ 147 ಜನರಿಗೆ ಸೋಂಕು ಪತ್ತೆಯಾಗಿದೆ. ಬಳ್ಳಾರಿಯಲ್ಲಿ 90, ವಿಜಯಪುರದಲ್ಲಿ 51, ಕಲಬುರಗಿಯಲ್ಲಿ 49, ಉಡುಪಿ ಹಾಗೂ ಧಾರವಾಡದಲ್ಲಿ ತಲಾ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರ ಕನ್ನಡ 21, ಚಾಮರಾಜ ನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರದಲ್ಲಿ ತಲಾ 13, ಬೆಳಗಾವಿ ಹಾಗೂ ದಾವಣಗೆರೆ ತಲಾ 11, ರಾಯಚೂರು, ಮಂಡ್ಯ 10, ಚಿಕ್ಕಮಗಳೂರು 9, ಶಿವಮೊಗ್ಗ 8, ಗದಗ 7, ರಾಮನಗರ 6, ಬಾಗಲಕೋಟೆ 4, ಚಿತ್ರದುರ್ಗದಲ್ಲಿ 3 ಪ್ರಕರಣ ಪತ್ತೆಯಾಗಿದೆ.
ಇಂದು ರಾಜ್ಯದಲ್ಲಿ 603 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
—————————————-
ಪ್ರುಮುಖ ಸುದ್ದಿ –
ಶಿಕ್ಷಕರಿಗೆ ಮನೆಯಿಂದಲೇ ಕೆಲಸ: ಒಂದೆರಡು ದಿನದಲ್ಲಿ ಆದೇಶ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ