ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇಂದು ಸಂಜೆ ಬಿಡುಗಡೆಯಾಗಿರುವ ಹೆಲ್ತ್ ಬುಲಿಟಿನ್ ಪ್ರಕಾರ ರಾಜ್ಯದಲ್ಲಿ ಮತ್ತೆ 13 ಜನರಿಗೆ ಸೋಂಕು ಪತ್ತೆಯಾಗಿದೆ.
ಇದರಿಂದಾಗಿ ಇಂದು ಒಂದೇ ದಿನ 25 ಜನರಿಗೆ ಸೋಂಕು ದೃಢಪಟ್ಟಂತಾಗಿದೆ.
ಇಂದು ಬಾಗಲಕೋಟೆಯ 7, ನಂಜನಗೂಡಿನ 6, ಬೆಂಗಳೂರಿನ 3, ಕಲಬುರ್ಗಿಯ 2, ವಿಜಯಪುರದ 2, ಬೆಳಗಾವಿ, ಹುಬ್ಬಳ್ಳಿ -ಧಾರವಾಡ, ಗದಗ , ಮೈಸೂರು, ಮಂಡ್ಯದ ತಲಾ ಒಂದು ಪ್ರಕರಣ ಇಂದು ದೃಢಪಟ್ಟಿದೆ.
ಇಂದು ದೃಢಪಟ್ಟಿರುವ ಪ್ರಕರಣಗಳಲ್ಲಿ 10 ಸೆಕೆಂಡರಿ ಕಾಂಟಾಕ್ಟ್ ಪ್ರಕರಣಗಳಾಗಿವೆ. ಇಂದು ದೃಢಪಟ್ಟವರಲ್ಲಿ ಒಟ್ಟೂ 5 ಜನ ಮಹಿಳೆಯರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ