ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮವಾಗಿ ನಡೆಸುತ್ತಿದ್ದ ಮೂರು ಸ್ಪಾಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಮಹಿಳಾ ರಕ್ಷಣಾ ದಳ ಇಬ್ಬರನ್ನು ಬಂಧಿಸಿದ್ದು, ವಿದೇಶಿ ಮಹಿಳೆಯರು ಸೇರಿ 13 ಮಹಿಳೆಯರನ್ನು ರಕ್ಷಿಸಿದ್ದಾರೆ.
ಉತ್ತರ ಭಾರತ ಮೂಲದ ದೇವೇಂದರ್, ಅಭಿಜಿತ್ ಬಂಧಿತರು. ಆರೋಪಿಗಳು ಕೆಲಸದ ಆಮಿಷವೊಡ್ಡಿ ಬೇರೆ ಬೇರೆ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಸ್ಪಾಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ದೂಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಸಿಬ್ಬಂದಿ, ರಾಯಲ್ ಸ್ಪಾ ಆಂಡ್ ಸಲೂನ್, ಏಸ್ತೆಟಿಕ್ ಯೂನಿಸೆಕ್ಸ್ ಸೆಲೂನ್ ಆಂಡ್ ಸ್ಪಾ, ನಿಸರ್ಗ ಆಯುರ್ವೇದಿಕ್ ಕ್ಲೀನಿಕ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ, ಟರ್ಕಿ ದೇಶದ ಇಬ್ಬರು ಮಹಿಳೆಯರು, ನಾಗಾಲ್ಯಾಂಡ್ ನ ಇಬ್ಬರು, ಅಸ್ಸಾಂ ನ ಮೂವರು ಮಹಿಳೆಯರು, ದೆಹಲಿ ಮೂಲದ ಇಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಅಲ್ಲದೇ ಅಕ್ರಮ ಚಟುವಟಿಕೆ ನಡೆಸಲು ಸಹಕಾರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ವಿರುದ್ಧ ಹೆಚ್.ಎಸ್.ಆರ್ ಲೇಔಟ್, ಮಡಿವಾಳ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದು, ತನಿಖೆ ಮುಂದುವರೆದಿದೆ.
ಫೇಲ್ ಆಗಿದ್ದಕ್ಕೆ ಬೈದ ಪೋಷಕರು; ಮನೆ ಬಿಟ್ಟು ನಾಪತ್ತೆಯಾದ ಯುವಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ