ಪ್ರಗತಿವಾಹಿನಿ ಸುದ್ದಿ: ಮುಸ್ಲಿಮರ ಪವಿತ್ರ ಹಜ್ ಯಾತ್ರೆ ವೇಳೆ ಈ ವರ್ಷ 1,301 ಜನರು ಸಾವನ್ನಪ್ಪಿದ್ದಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಹಜ್ ಯಾತ್ರೆಯಲ್ಲಿ ಹೆಚ್ಚಿನ ಸಾವಿನ ಪ್ರಕರಣಗಳು ಶಾಖದ ಒತ್ತಡದಿಂದ ಸಂಭವಸಿದೆ. ಅದರಲ್ಲೂ ಸುಮಾರು ಐದರಲ್ಲಿ ನಾಲ್ಕರಷ್ಟು ಜನರು ಅನಧಿಕೃತ ಪ್ರವಾಸ ಕೈಗೊಂಡವರೇ ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಅಸ್ವಸ್ಥರು ಆರೈಕೆಯಲ್ಲಿದ್ದಾರೆ. ಸಾವಿನ ಸಂಖ್ಯೆ 1,301 ತಲುಪಿರುವುದು ವಿಷಾದನೀಯವಾಗಿದೆ ಎಂದು ಹೇಳಿದೆ.
ಮರಣ ಹೊಂದಿದವರಲ್ಲಿ 83% ಜನರು ಅನಧಿಕೃತವಾಗಿ ಹಜ್ ಯಾತ್ರೆ ಕೈಗೊಂಡಿದ್ದರು. ನೇರ ಸೂರ್ಯನ ಬೆಳಕಿನಲ್ಲಿ ಆಶ್ರಯದ ಸೌಕರ್ಯವಿಲ್ಲದೆ ದೂರದವರೆಗೆ ನಡೆದು ಕೊಂಡು ಬಂದ ಹಿನ್ನೆಲೆ ಸಾವುಗಳು ಸಂಭವಿಸಿದೆ ಎಂಬುದು ಗಮನಾರ್ಹ ವಿಚಾರ. ವೃದ್ಧರು ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದವರೇ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಕುಟುಂಬದವರನ್ನು ಗುರುತಿಸಲಾಗುತ್ತಿದೆ ಎಂದು ವರದಿಯಾಗಿದೆ.
ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ ವರದಿಯಾಗಿರುವ ನೂರಾರು ಸಾವುಗಳಿಗೆ ಮುಖ್ಯ ಕಾರಣ ತೀವ್ರ ಶಾಖ ಎಂದು ತಿಳಿದುಬಂದಿದೆ. ಮೆಕ್ಕಾದಲ್ಲಿ ತಾಪಮಾನವು ಸೋಮವಾರ ದಾಖಲೆಯ 125 ಡಿಗ್ರಿ ಫ್ಯಾರನ್‌ಹೀಟ್‌ಗೆ ಏರಿದೆ. ಅನಧಿಕೃತ ಯಾತ್ರೆಗಳ ಸಂಖ್ಯೆಯಿಂದ ಸಮಸ್ಯೆಗಳು ಹೆಚ್ಚಿವೆ ಎಂದು ವಿವಿಧ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ