Latest

14 ನಿಗಮ ಮಂಡಳಿ, 8 ಸಂಸದೀಯ ಕಾರ್ಯದರ್ಶಿ ನೇಮಕ ಆದೇಶ

 

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕೊನೆಗೂ ನಿಗಮಮಂಡಳಿ ಚೇರಮನ್ ಮತ್ತು ಸಂಸದೀಯ ಕಾರ್ಯದರ್ಶಿಗಳ ನೇಮಕ ಆದೇಶ ಹೊರಬಿದ್ದಿದೆ.

ಕಾಂಗ್ರೆಸ್ ಸಲ್ಲಿಸಿದ್ದ 14 ನಿಗಮ ಮಂಡಳಿಗಳಿಗೆ ಚೇರಮನ್ ಮತ್ತು 8 ಸಂಸದೀಯ ಕಾರ್ಯದರ್ಶಿಗಳ ಪಟ್ಟಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಿ ಹಾಕಿದ್ದಾರೆ. 

Home add -Advt

ಬಿ.ಕೆ.ಸಂಗಮೇಶ್ವರ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮ, ಆರ್.ನರೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಬಿ.ನಾರಾಯಣ ರಾವ್ ಅರಣ್ಯ ಅಭಿವೃದ್ಧಿ ನಿಗಮ, ಉಮೇಶ ಜಿ.ಜಾಧವ ಉಗ್ರಾಣ ನಿಗಮ, ಸುರೇಶ ಬಿ.ಎಸ್. ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಲಕ್ಷ್ಮಿ ಹೆಬ್ಬಾಳಕರ್ ಖನಿಜ ನಿಗಮ (ಮೈಸೂರು ಮಿನರಲ್ಸ್), ಪಿ.ಡಿ.ರಾಜೇಗೌಡ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ರಘುಮೂರ್ತಿ ಹಟ್ಟಿ ಚಿನ್ನದ ಗಣಿ ಕಂಪನಿ, ಯಶವಂತರಾಯ ಗೌಡ ವಿ.ಪಾಟೀಲ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿ.ಎ.ಬಸವರಾಜ ಸಾಬೂನು ಮತ್ತು ಮಾರ್ಜಕ ನಿಯಮಿತ, ಬಿ.ಶಿವಣ್ಣ ವಿದ್ಯುನ್ಮಾನ ಅಭಿವೃದ್ದಿ ನಿಗಮ, ಎಸ್.ಎನ್.ನಾರಾಯಣ ಸ್ವಾಮಿ ಬಿ.ಆರ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮುನಿರತ್ನ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ,  ಶಿವರಾಮ ಹೆಬ್ಬಾರ ವಾಯವ್ವ ರಸ್ತೆ ಸಾರಿಗೆ ಸಂಸ್ಥೆ ಚೇರಮನ್ ಆಗಿ ನೇಮಕವಾಗಿದ್ದಾರೆ.

ಸಂಸದೀಯ ಕಾರ್ಯದರ್ಶಿಗಳಾಗಿ ಕೆ.ಅಬ್ದುಲ್ ಜಬ್ಬಾರ, ಡಾ.ಅಂಜಲಿ ನಿಂಬಾಳ್ಕರ್, ಐವಾನ್ ಡಿಸೋಜಾ, ಮಹಾಂತೇಶ ಕೌಜಲಗಿ, ರೂಪಕಲಾ ಎಂ.ಶಶಿಧರ, ಕೆ.ಗೋವಿಂದ ರಾಜ್, ರಾಘವೇಂದ್ರ ಹಿಟ್ನಾಳ, ಡಿ.ಎಸ್.ಹೂಲಗೇರಿ ನೇಮಕವಾಗಿದ್ದಾರೆ. 

Related Articles

Back to top button