Kannada NewsLatestNational

*ಆನ್ ಲೈನ್ ಗೇಮ್ ಆಡುವ ಮುನ್ನ ಇರಲಿ ಎಚ್ಚರ: ಪಬ್ ಜಿ ಆಡುವಾಗ ಮೈಂಡ್ ಅಟ್ಯಾಕ್ ಗೆ ಯುವಕ ಸಾವು*

ಲಖನೌ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಗೇಮ್ ಗಳಿಂದ ಯುವಕರು ಬಲಿಯಾಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಆನ್ ಲೈನ್ ಗೇಮ್ ನಲ್ಲಿ ಪಬ್ ಜಿ ಆಡುತ್ತಿದ್ದ ಯುವಕನೊಬ್ಬ ಒತ್ತಡ ಹೆಚ್ಚಾಗಿ ಮೈಂಡ್ ಅಟ್ಯಾಕ್ ಆಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಮೊಹಮ್ಮದ್ ಕೈಫ್ (22) ಮೃತ ಯುವಕ. ಖೈರ್ ನಗರದ ಗುಲಾರ್ ವಾಲಿ ಗಾಲಿಯ ನಿವಾಸಿ. ಪ್ರಾಪರ್ಟಿ ಡೀಲರ್ ಫಾರುಕ್ ಅವರ ಏಕೈಕ ಪುತ್ರ. ಮೊಹಮ್ಮದ್ ಹಲವು ದಿನಗಳಿಂದ ಆನ್ ಲೈನ್ ಗೇಮ್ ಆಡುತ್ತಿದ್ದ. ಅದರಲ್ಲಿಯೂ ಪಬ್ ಜಿ ಗೇಮ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ದ, ಸಾಮಾನ್ಯವಾಗಿ ಯಾವುದೇ ಆನ್ ಲೈನ್ ಗೇಮ್ ಗಳು ಕೂಡ ಅದೊಂಡು ರೀತಿಯ ಅಡಿಕ್ಷನ್. ನಿರಂತರವಾಗಿ ಗೇಮ್ ಆಡುವ ಕ್ರೇಜ್ ಚಟವಾಗಿ ಬಿಡುತ್ತದೆ.

ಇದೇ ರೀತಿ ನಿರಂತರವಾಗಿ ಪಬ್ ಜಿ ಆಡುತ್ತಿದ್ದ ಯುವಕ ಮೊಹಮ್ಮದ್ ಗೆ ತಲೆಯಲ್ಲಿ ಒತ್ತಡ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ತಡರಾತ್ರಿ ೩ ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದಾನೆ. ಪೋಷಕರು ಯುವಕನ್ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರೀಕ್ಷಿಸಿದಾಗ ಯುವಕನ ರಕ್ತದೊತ್ತಡ 300 ದಾಟಿರುವುದು ಕಂಡುಬಂದಿದೆ. ಅಲ್ಲಿಂದ ಆತನನ್ನು ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗಿತ್ತು. ಎರಡು ದಿನಗಳ ಕಾಲ ಯುವಕ ಜೀವನ್ಮರಣದ ನಡುವೆ ಹೋರಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಕೊನೆಯುಸಿರೆಳೆದಿದ್ದಾನೆ. ಒತ್ತಡದಿಂದಾಗಿ ಮೆದುಳಿನಲ್ಲಿನ ನರ ಒಡೆದು ರಕ್ತಸ್ರಾವವಾಗಿದೆ. ಮೈಂಡ್ ಅಟ್ಯಾಕ್ ಆಗಿ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.


Related Articles

Back to top button