
ಪ್ರಗತಿವಾಹಿನಿ ಸುದ್ದಿ, ಪುಣೆ: ಇಲ್ಲಿನ ಬಾರಾಮತಿ ಪಟ್ಟಣದಲ್ಲಿ ಕಳ್ಳರ ತಂಡವೊಂದು ಬರಿ ಮೂರು ತಾಸುಗಳ ಅವಧಿಯಲ್ಲಿ 14 ಫ್ಲ್ಯಾಟ್ ಗಳಲ್ಲಿ ಕಳ್ಳತನ ನಡೆಸಿ ‘ಪ್ರಚಂಡ ಕಳ್ಳ’ರ ಪಟ್ಟವೇರಿದೆ.
ಗುರುವಾರ ಕಾರೊಂದರಲ್ಲಿ ಬಂದು ನಿರ್ದಿಷ್ಟ ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಸಿಕೊಂಡು ಅಲ್ಲಿಗೆ ನುಗ್ಗಿ ಅಪಾರ ಪ್ರಮಾಣದ ನಗದು, 200 ಗ್ರಾಂ ಚಿನ್ನಾಭರಣ, ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಿದೆ ಪರಾರಿಯಾಗಿದೆ.
ಈ ಚಾಣಾಕ್ಷ ಮತ್ತು ಶರವೇಗದ ಕಳ್ಳರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇವರು ಕೃತ್ಯ ನಡೆಸಿದ ಅಪಾರ್ಟ್ ಮೆಂಟ್ ಗಳು ಹಾಗೂ ಸನಿಹದ ಸಿಸಿಟಿವಿಯಲ್ಲಿ ದಾಖಲಾದ ವಿಡಿಯೊ ಫೂಟೇಜ್ ಗಳನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ.




