Kannada NewsKarnataka News

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಇಂದು 14 ಜನರ ಸಾವು

ಇಂದು ಒಟ್ಟೂ 1026 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶನಿವಾರ ಬೆಳಗಾವಿಯಲ್ಲಿ ಒಂದೇ ದಿನ 14 ಜನರು ಕೊರೋನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕೃತವಾಗಿ ಪ್ರಕಟಿಸಿದ ಅತೀ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ.

ಇಂದು ಒಂದೇ ದಿನ ಜಿಲ್ಲೆಯಲ್ಲಿ 1026 ಜನರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿ ತಾಲೂಕಿನಲ್ಲಿ 400, ಅಥಣಿಯಲ್ಲಿ 55, ಬೈಲಹೊಂಗಲದಲ್ಲಿ 17, ಚಿಕ್ಕೋಡಿಯಲ್ಲಿ 122, ಗೋಕಾಕಲ್ಲಿ 112, ಹುಕ್ಕೇರಿಯಲ್ಲಿ 64, ಖಾನಾಪುರದಲ್ಲಿ 53, ರಾಮದುರ್ಗದಲ್ಲಿ 43, ರಾಯಬಾಗದಲ್ಲಿ 30, ಸವದತ್ತಿಯಲ್ಲಿ 125 ಹಾಗೂ ಇತರೆ 5 ಜನರಿಗೆ ಹೊಸದಾಗಿ ಸೋಂಕು ಪತ್ತೆಯಾಗಿದೆ.

Home add -Advt

ಇಂದು ಎಲ್ಲ 14 ಜನರೂ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇಬ್ಬರು ಗೋಕಾಕ ಮತ್ತು ತಲಾ ಒಬ್ಬರು ಅಥಣಿ ಹಾಗೂ ರಾಮದುರ್ಗದವರು. ಉಳಿದ 10 ಜನರೂ ಬೆಳಗಾವಿ ತಾಲೂಕಿನವರು.

 

ಸರಕಾರದ ವಿರುದ್ಧ ಬಿಜೆಪಿ ಶಾಸಕ ಅರುಣ ಶಹಾಪುರ ತೀವ್ರ ಅಸಮಾಧಾನ

 

Related Articles

Back to top button