Latest

ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ

ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಧಾನಸಭೆಯಲ್ಲಿ ಸರಕಾರ ವಿಶ್ವಾಸಮತ ಯಾಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂದಿನಿಂದ ಜುಲೈ 25ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. 5 ಜನಕ್ಕಿಂತ ಹೆಚ್ಚು ಜನ ಒಂದು ಕಡೆ ಸೆರಲು ಅವಕಾಶವಿರುವುದಿಲ್ಲ.

ಬೆಂಗಳೂರಿನಾದ್ಯಂತ ಮದ್ಯದ ಅಂಗಡಿಗಳನ್ನೂ ಬಂದ್ ಮಾಡಲು ಆದೇಶಿಸಲಾಗಿದೆ.

Home add -Advt

ಮುಖ್ಯಮಂತ್ರಿ ಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಭಾಷಣ ಮಾಡುತ್ತಿದ್ದು, ಭಾಷಣ ಮುಗಿದ ತಕ್ಷಣ ವಿಶ್ವಾಸ ಮತ ಯಾಚನೆಗೆ ಮತದಾನ ನಡೆಯುವ ಸಾಧ್ಯತೆ ಇದೆ.

ನಾನು ನನ್ನದೇ ಕೆಲವು ಕಾರಣಗಳಿಗಾಗಿ ಸಮಯ ತೆಗೆದುಕೊಂಡಿದ್ದೇನೆ ವಿನಃ ಈ ರಾಜ್ಯವನ್ನು ಲೂಟಿ ಮಾಡಲು ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ತಮ್ಮ ರಾಜಕೀಯ ಜೀವನವನ್ನು ಕುಮಾರಸ್ವಾಮಿ ಮೆಲುಕು ಹಾಕುತ್ತಿದ್ದಾರೆ.

 

 

Related Articles

Back to top button