Kannada NewsKarnataka News

ಅಕ್ರಮವಾಗಿ ಸಾಗಿಸಲಾಗುತ್ತಿತ್ತು 152 ಕೆಜಿ ಬೆಳ್ಳಿ

ಅಕ್ರಮವಾಗಿ ಸಾಗಿಸುತ್ತಿದ್ದ 152 ಕೆಜಿ ಬೆಳ್ಳಿ ಪತ್ತೆ

 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಹಿರೇಬಾಗೇವಾಡಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಕಾರಿನಲ್ಲಿ ಅನಧಿಕೃತವಾಗಿ ಬೆಳ್ಳಿ ವಸ್ತುಗಳನ್ನು ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ್ದಾರೆ.

ಒಂದು ಬಿಳಿ ವೋಕ್ಸ್ ವ್ಯಾಗನ್ ಕಾರ್ (ನಂ. ಎಮ್.ಎಚ್-೧೧/ಎವಾಯ್-೮೮೧೧) ತಡೆದು ತಪಾಸಣೆ ಮಾಡಲಾಗಿ  ವಾಹನದ ಸೀಟಿನ ಹಿಂಬಾಗದಲ್ಲಿ ಕಚ್ಚಾ ಬೆಳ್ಳಿ ಗಟ್ಟಿಗಳು ಸುಮಾರು ೧೫೨ಕೆ.ಜಿ ೯೩೪ ಗ್ರಾಂ ನಷ್ಟು ಇದ್ದದ್ದು ಕಂಡು ಬಂದಾಗ ಕೂಡಲೇ ಬೆಳ್ಳಿ, ವಾಹನ ಹಾಗೂ ಅದರಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಲಾಯಿತು.

ಕಾರಿನಲ್ಲಿ ದತ್ತಾತ್ರೇಯ ಬಲಿರಾಂ ಮಾಳಿ [೨೯] ಸಾ. ಉಸ್ಮಾನಾಬಾದ ರಾಜ್ಯ ಜಿ. ಆಳನಿ ರಾಜ್ಯ ಮಹಾರಾಷ್ಟ್ರ,  ಶಾಜಿ ಪ್ರಕಾಶರಾವ್ ದೇಶಮುಖ [೩೫] ಸಾ. ೫೪, ಅಚ್ಚುರಾಮ್ ಸ್ರ್ಟೀಟ್, ಶೌಕಟ್ ಸೇಲಂ, ತಮಿಳುನಾಡು ರಾಜ್ಯ, ಕೃಷ್ಣಮೂರ್ತಿ ಉಪಿರಮಳ ಪರಮಳ [೪೯] ಸಾ: ೫/೨೩೭ ಸೆಲತಾಮಪಟ್ಟಿ ಸುರಮಂಗಳಂ ಸೆಲಂ ತಮಿಳುನಾಡು ರಾಜ್ಯ, ವಿಕಾಸ ರಾಮಚಂದ್ರ ನಲವಡೆ [೪೫] ಸಾ; ಅಂಬೆವಾಡಿ ತಾ: ಕಟಾಮೋ ಜಿ: ಸಾತಾರಾ ಮಹಾರಾಷ್ಟ್ರ ರಾಜ್ಯ,  ನಿವಾಸ ರಾಮಚಂದ್ರ ನಲವಡೆ [೪೫] ಸಾ. ಅಂಬೋಡಿ ತಾ. ಕಟಾವು ಜಿ. ಸಾತಾರಾ ರಾಜ್ಯ ಮಹಾರಾಷ್ಟ್ರ ಇದ್ದರು.

ಇವರು ಮಹಾರಾಷ್ಟ್ರದ ಹುಪರಿಯ ಅಂಗಡಿಗಳಲ್ಲಿ ಖರೀದಿ ಮಾಡಿ ಕಚ್ಚಾ ಬಿಲ್ಲುಗಳೊಂದಿಗೆ ಸರ್ಟಿಫಿಕೇಟ್ ಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು.  ದಾಖಲಾತಿಗಳಲ್ಲಿ ಜಿಎಸ್‌ಟಿ/ತೆರಿಗೆ ಕಟ್ಟಿದ್ದು ಕಂಡು ಬರದೇ ಇದ್ದಾಗ ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-೧೭) ಬೆಳಗಾವಿ ಇವರಿಗೆ ಪತ್ರ ರವಾನಿಸಿ ಕ್ರಮ ಕೈಕೊಳ್ಳಲು ಪೊಲೀಸರು ತಿಳಿಸಿದರು.

ವಾಣಿಜ್ಯ ಇಲಾಖೆಯವರು ಎಲ್ಲವನ್ನೂ ಪರಿಶೀಲಿಸಿ ತಪ್ಪಿತಸ್ಥರಿಗೆ ರೂ.೨,೬೪,೬೦೦ ದಂಡವನ್ನು ವಿಧಿಸಿದ್ದಾರೆ. ಈ ರೀತಿ ಅಕ್ರಮವಾಗಿ ಬೆಳ್ಳಿಯನ್ನು ಸಾಗಿಸುತ್ತಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಮೀಟರ್ ಬಳಸದ ಅಟೋರಿಕ್ಷಾಗಳ ವಿರುದ್ಧ ಪ್ರಕರಣ 

ಬೆಳಗಾವಿ ನಗರ ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆಯವರ (ಆರ್‌ಟಿಓ) ಜಂಟಿ ಕಾರ್ಯಾಚರಣೆಯಲ್ಲಿ  ಮೀಟರ್ ಹಾಕದೇ ಮನಸೋ ಇಚ್ಛೆಯಂತೆ ಬಾಡಿಗೆ ಪಡೆಯುವ ಆಟೋ ಚಾಲಕರ ವಿರುದ್ಧ ಕ್ರಮ ಕೈಕೊಂಡು ಒಟ್ಟು ೧೨೧ ಆಟೋರಿಕ್ಷಾಗಳನ್ನು ಪರಿಶೀಲಿಸಲಾಯಿತು.

ಅವುಗಳಲ್ಲಿ ೦೧ ಅಟೋರಿಕ್ಷಾವನ್ನು ತಡೆಹಿಡಿಯಲಾಗಿದ್ದು, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ೫೭ ಆಟೋರಿಕ್ಷಾಗಳ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ರೂ.೯,೦೦೦ ಸ್ಥಳದಂಡ ವಿಧಿಸಲಾಗಿದೆ.

ಮೀಟರ್ ಬಳಸಿದ್ದರಿಂದ ಹಾಗೂ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಂಡ ೬೩ ಆಟೋರಿಕ್ಷಾ ಚಾಲಕರಿಗೆ ಮುಂದೆಯೂ ಕಾನೂನು ಪಾಲಿಸಲು ಪ್ರೋತ್ಸಾಹಿಸಿ ಅವರ ಆಟೋರಿಕ್ಷಾ ಬಿಡುಗಡೆ ಮಾಡಲಾಗಿದೆ.

ಆಗಸ್ಟ್ 15ರಿಂದ ಪ್ರತಿನಿತ್ಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಗರದಲ್ಲಿ ಆಟೋರಿಕ್ಷಾ ಚಾಲಕರು ಸಾರ್ವಜನಿಕರಿಂದ ಹೆಚ್ಚಿನ ದರ ಕೇಳಿದರೆ, ಮೀಟರ್ ಅಳವಡಿಸದಿದ್ದರೆ ಅಥವಾ ಬಾಡಿಗೆಗೆ ನಿರಾಕರಿಸಿದರೆ ಅಂತಹ ಆಟೋಚಾಲಕರ ವಿರುದ್ಧ ವಾಹನ ಸಂಖ್ಯೆ ಸಮೇತ ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: ೧೦೦ & ೦೮೩೧-೨೪೦೫೨೩೩, ಹಾಗೂ ವಾಟ್ಸಪ್ ಸಂಖ್ಯೆ: ೯೪೮೩೯೩೧೧೦೦ ನೇದ್ದಕ್ಕೆ ಮಾಹಿತಿ ನೀಡಲು ಪೊಲೀಸರು ವಿನಂತಿಸಿದ್ದಾರೆ.

ಬೆಳಗಾವಿ ನಗರದ ಆಟೋರಿಕ್ಷಾ ಚಾಲಕರು, ಮಾಲೀಕರು ಹಾಗೂ ಆಟೋರಿಕ್ಷಾ ಸಂಘದವರು ಕಡ್ಡಾಯವಾಗಿ ಆಟೋ ಮೀಟರ್ ಬಳಸಿ ಸರ್ಕಾರ ನಿಗಧಿ ಪಡಿಸಿದ ದರದಂತೆ ಬಾಡಿಗೆ ಪಡೆಯುವುದು ಮತ್ತು ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲ ಸಮರ್ಪಕ ದಾಖಲಾತಿಗಳನ್ನು ಹೊಂದಿರತಕ್ಕದ್ದು, ತಪ್ಪಿದಲ್ಲಿ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

 ಜೂಜಾಟ ದಾಳಿ; 7 ಜನರ ಬಂಧನ 

ವಡಗಾವಿ ಆನಂದ ಮಾರ್ಗ ಹತ್ತಿರ ಇರುವ ಯಲ್ಲಪ್ಪ ಪಾಲೇಕರ ಇವರ ಮನೆಯ ಮುಂದೆ ಖುಲ್ಲಾ ಸ್ಥಳದಲ್ಲಿ ಅಂದರ್ ಬಾಹರ್  ಇಸ್ಪೀಟ್ ಜುಗಾರ ಆಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ  ಜಾವೀದ ಎಫ್. ಮುಶಾಪುರಿ, ಪೊಲೀಸ್ ಇನ್ಸಪೆಕ್ಟರ್, ಶಹಾಪೂರ ಪೊಲಿಸ್ ಠಾಣೆ  ಹಾಗೂ ಅವರ ಸಿಬ್ಬಂದಿ  ದಾಳಿ ಮಾಡಡಲಾಗಿದೆ.

ಇಸ್ಪೀಟ್ ಆಟ ಆಡುತ್ತಿದ್ದ ವಿಜಯ ಶಂಕರ ಜಾಗ್ರೂತೆ [೩೩] ಸಾ: ಶಾಸ್ತ್ರೀನಗರ ೫ ನೇ ಕ್ರಾಸ್,   ಶಿವಾನಂದ ಅರ್ಜುನ ಕಾಕತೀಕರ [೩೦] ಸಾ. ವಡಗಾವಿ,  ಯಲ್ಲಪ್ಪ ಹೂವಪ್ಪ ಪಾಲೇಕರ [೬೧] ಸಾ. ವಝೇಗಲ್ಲಿ ವಡಗಾಂವಿ,  ಮಂಜುನಾಥ ವಾಸುದೇವ ಅನ್ವೇಕರ [೩೪] ಸಾ. ಖಾಸಭಾಗ,  ಕಿರಣ ಬಾಬುರಾವ ಮಾಂಗಡೆ [೩೨] ಸಾ. ಗವಳಿಗಲ್ಲಿ,  ಪ್ರವೀಣ ವಸಂತ ಪಾಟೀಲ [೪೭] ಸಾ. ಸಂಬಾಜಿ ನಗರ, ವಡಗಾವಿ,  ವಿಜಯ ಶ್ರೀಕಾಂತ ತರಳೇಕರ [೩೩] ಸಾ. ರಾಮದೇವಗಲ್ಲಿ, ವಡಗಾವಿ ಇವರನ್ನು ವಶಕ್ಕೆ ಪಡೆದು  ಅವರ ಬಳಿ ಇದ್ದ ಒಟ್ಟು ರೂ.೭೭,೧೫೦ ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತ ಮಾಡಿ ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button