Kannada NewsLatest

ಸರದಾರ ರಾಜಾ ಲಖಮಗೌಡರ 156ನೇ ಜಯಂತಿ ಉತ್ಸವ ಸಮಾರಂಭ

ಸರದಾರ ರಾಜಾ ಲಖಮಗೌಡರ 156ನೇ ಜಯಂತಿ ಉತ್ಸವ ಸಮಾರಂಭ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ದಿನಾಂಕ 29-07-2019 ರಂದು ಸರ್.ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ “ಸರದಾರ ರಾಜಾ ಲಖಮಗೌಡರ 156ನೇ ಜಯಂತಿ ಉತ್ಸವ ಸಮಾರಂಭವು ಜರುಗಿತು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಲಿಂಗರಾಜ ಮಹಾವಿದ್ಯಾಲಯದ ಇಂಗ್ಲೀಷ್ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿಯಾದ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಆಗಮಿಸಿ ಮಾತನಾಡುತ್ತಾ, ರಾಜಾ ಲಖಮಗೌಡರು ಮಾದರಿ ವ್ಯಕ್ತಿತ್ವವನ್ನು ಹೊಂದಿದ್ದರು. ಅರ್ಥಪೂರ್ಣವಾದ ಬದುಕನ್ನು ಸಾಗಿಸಿದವರು. ಸದಿಚ್ಛೆಯಂತೆ ನುಡಿಯುತ್ತಿದ್ದರು. ಸದಿಚ್ಛೆಯಂತೆ ಸನ್ಮಾರ್ಗದಲ್ಲಿ ನಡೆದವರು.

ಸಮಾಜದ ಬಗ್ಗೆ ಚಿಂತನೆ ಮಾಡಿ, ಮನುಕುಲದ ಒಳಿತಿಗಾಗಿ ಶ್ರಮಿಸಿದರು. ಕೊಡುಗೈ ದಾನಿಯಾಗಿ ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ದಾನಮಾಡಿದರು. ರಾಜಾ ಲಖಮಗೌಡರು ದಾನ ಮಾಡಿದ ಸತ್ಕರ‍್ಯವು ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿದೆ. ರಾಜಾ ಲಖಮಗೌಡರು ಜೀವನದಲ್ಲಿ ಅಳವಡಿಸಿಕೊಂಡ ಮೌಲಿಕ ಗುಣಗಳನ್ನು ಮಾದರಿಯಾಗಿಟ್ಟುಕೊಂಡು ದಾನ-ಧರ್ಮದಂತಹ ಪುಣ್ಯ ಕರ‍್ಯಗಳನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ. ಎಲ್.ವ್ಹಿ. ದೇಸಾಯಿ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ರಾಜಾ ಲಖಮಗೌಡರ ಜೀವನ ಮೌಲ್ಯಗಳನ್ನು ತಿಳಿದುಕೊಂಡು ಸನ್ಮಾರ್ಗಿಗಳಾಗಿ ಜೀವನ ನಡೆಸಬೇಕು. ರಾಜಾ ಲಖಮಗೌಡರ ಆದರ್ಶಗುಣಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.

ಪ್ರಾರಂಭದಲ್ಲಿ ಪದವಿ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ವೇದಿಕೆಯ ಮೇಲೆ ರಾಜಾ ಲಖಮಗೌಡ ಪದವಿ-ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು ಉಪಸ್ಥಿತರಿದ್ದರು.

ಇದೇ ಸುಸಂದರ್ಭದಲ್ಲಿ ಪ್ರೊ. ಎಸ್.ಬಿ. ತಾರದಾಳೆ ಸಂಪಾದಿಸಿದ “ಸಾಹಿತ್ಯ ಸಂಭ್ರಮ”ಎಂಬ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.
ಕುಮಾರಿ. ವಿಜಯಲಕ್ಷ್ಮೀ ಹಾಗೂ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಪ್ರೊ.(ಶ್ರೀಮತಿ.) ಶ್ಯಾಮಲಾ ಮುನ್ನೊಳಿ ಅವರು ವಂದಿಸಿದರು. ಪ್ರೊ. ಎಸ್.ಬಿ. ಬನ್ನಿಮಟ್ಟಿ ಕಾರ್ಯಾಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಾವಚಿತ್ರದಲ್ಲಿ: ಮಾತನಾಡುತ್ತಿರುವವರು ಮುಖ್ಯ ಅತಿಥಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ, ವೇದಿಕೆಯ ಮೇಲೆ ಪದವಿ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ, ಶ್ರೀ. ಎಲ್.ವ್ಹಿ. ದೇಸಾಯಿ ಕಾರ್ಯಾಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಹಾಗೂ ಪದವಿ ಪೂರ್ವ ಪ್ರಾಚಾರ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು ಉಪಸ್ಥಿತರಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button