
ಪ್ರಗತಿವಾಹಿನಿ ಸುದ್ದಿ, ಗೋಕಾಕ -ಗೋಕಾಕ ವಿಧಾನ ಸಭಾ ಕ್ಷೇತ್ರದ ಮರಡಿಮಠ ಗ್ರಾಮದಲ್ಲಿ 18.50 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಅಕ್ರಮಾಗಿ ಹಣ ಸಾಗಾಟ ಮಾಡಲಾಗುತ್ತಿದ್ದಾಗ ಫ್ಲೈಯಿಂಗ್ ಸ್ಕಾಡ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಗುರುವಾರ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಹಣ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.
ಹಣ ಸಾಗಿಸುತ್ತಿದ್ದ ಕೊಣ್ಣೂರಿನ ರಾಜು ಭೀಮಪ್ಪ ಬೆಳಮರಡಿ ಮತ್ತು ವಿಶಾಲ್ ಯಲ್ಲಪ್ಪ ಹಂಚಿನಮನಿ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ. ಪ್ರವೀಣ ಭೀಮಪ್ಪ ಗುಡ್ಡಕಾಯಿ ಎನ್ನುವವರಿಂದ ಪಡೆದು ರಮೇಶ್ ಎನ್ನುವವರಿಗೆ ಹಸ್ತಾಂತರಿಸಲು ಹೋಗುತ್ತಿದ್ದುದಾಗಿ ಆರೋಪಿಗಳು ತಿಳಿಸಿದ್ದಾರೆ.
ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ