ಪ್ರಗತಿವಾಹಿನಿ ಸುದ್ದಿ; ಜೈಪುರ: 19 ವರ್ಷದ ಮಾಡೆಲ್ ಓರ್ವರು ಹೋಟೆಲ್ ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.
ಗುಂಗುನ್ ಉಪಾಧ್ಯಾಯ (19) ಆತ್ಮಹತ್ಯೆಗೆ ಯತ್ನಿಸಿದ ರೂಪದರ್ಶಿ. ಆತ್ಮಹತ್ಯೆ ಯತ್ನಕ್ಕೂ ಮುನ್ನ ರೂಪದರ್ಶಿ ತನ್ನ ತಂದೆಗೆ ಕರೆ ಮಾಡಿದ್ದು, ಉದಯಪುರದಿಂದ ಜೋಧ್ ಪುರ್ ಗೆ ತೆರಳಿದ್ದಾರೆ.
ಬಳಿಕ ಹೋಟೆಲ್ ಲಾರ್ಡ್ಸ್ ಇನ್ ನ ರೂಮಿನ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮ್ಮ ಮಗಳು ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ ರೂಪದರ್ಶಿಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯೋನ್ಮುಖರಾದ ಪೊಲಿಸರು ಹೋಟೆಲ್ ಗೆ ದಾವಿಸಿದ್ದಾರೆ. ಅಷ್ಟರಲ್ಲಿ ರೂಪದರ್ಶಿ ಗುಂಗುನ್ ಹೋಟೆಲ್ ಮಹಡಿಯಿಂದ ಹಾರಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಗುನ್ ಕಾಲು ಹಾಗೂ ಎದೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಆಕೆಗೆ ರಕ್ತ ನೀಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಉದ್ಯಮಿಯ ಭೀಕರ ಕೊಲೆ: ಅನೈತಿಕ ಸಂಬಂಧ ಶಂಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ