Belagavi NewsBelgaum NewsHealthKannada NewsKarnataka News

*ಬೆಳಗಾವಿಗೆ ಆಗಮಿಸಲಿದ್ದಾರೆ ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಶಿರಸಿ ವೇದ ವೆಲ್‌ನೆಸ್ ಸೆಂಟರ್ ಹಾಗೂ ನಿಸರ್ಗಮನೆ ಖ್ಯಾತ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

Home add -Advt

ಮಾರ್ಚ್ 14 ಮತ್ತು 15ರಂದು ಬೆಳಗಾವಿಯ ಹೊಟೇಲ್ ಹೆರಿಟೇಜ್ (ಸೇಂಟ್ ಝೇವಿಯರ್ಸ್ ಶಾಲೆಯ ಎದುರು) ನಲ್ಲಿ ವಾಸ್ತವ್ಯ ಹೂಡಿ, ಸಾರ್ವಜನಿಕರಿಗೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.

ಈ ವೇಳೆ “ಮನೆಯಲ್ಲೇ ಪರಿಹಾರ”, “ಆಹಾರ ಆರೋಗ್ಯ”, “ಪವರ್ ಡಿಟಾಕ್ಸ್” ಹಾಗೂ “ಅಡುಗೆ ಮನೆಯಲ್ಲಿ ಅಸ್ತಿತ್ವ ಆರೋಗ್ಯವೇ ಔಷಧಿ” ಮುಂತಾದ ವಿಷಯಗಳ ಕುರಿತ ಪುಸ್ತಕಗಳು ಕೂಡ ಈ ಸಂದರ್ಭದಲ್ಲಿ ಸಿಗಲಿವೆ.

ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರಿಂದ ಸಲಹೆ ಪಡೆಯಲು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9632867180 ಅಥವಾ 9353981093 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Related Articles

Back to top button