Kannada NewsKarnataka NewsLatest
ಬೆಳಗಾವಿಯಲ್ಲಿ 2 ದಿನ ಕಿತ್ತೂರು ಚನ್ನಮ್ಮ ನಾಟಕ: ಉಚಿತ ಪ್ರವೇಶ – ಡಾ.ರವಿ ಪಾಟೀಲ ಮಾಹಿತಿ

ಪ್ರಗತಿವಾಹಿನಿ ಸು ದ್ದಿ, ಬೆಳಗಾವಿ: ಮಾ. 23 ಮತ್ತು 24ರಂದು ಬೆಳಗಾವಿಯಲ್ಲಿ ಕಿತ್ತೂರು ಚನ್ನಮ್ಮ ನಾಟಕ ನಡೆಯಲಿದೆ.
ಕ್ಲಬ್ ರಸ್ತೆಯ ಸಿಪಿಐಡಿ ಮೈದಾನದಲ್ಲಿ ಸಂಜೆ 5.20ರಿಂದ ರಾತ್ರಿ 8.40ಗಂಟೆಯವರೆಗೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬಿಜೆಪಿ ಮೆಡಿಕಲ್ ಸೆಲ್ ಸಂಚಾಲಕ, ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ (ವಿಒಟಿಸಿ) ನಿರ್ದೇಶಕ, ನಾಟಕದ ಪ್ರಾಯೋಜಕತ್ವ ವಹಿಸಿಕೊಂಡಿರುವ ಡಾ.ರವಿ ಬಿ. ಪಾಟೀಲ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರಂಗಾಯಣ ಮತ್ತು ವಿಒಟಿಸಿ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟದ ದಿನಗಳನ್ನು ನೆನಪಿಸುವಂತೆ ಈ ನಾಟಕ ನಡೆಯಲಿದೆ. ಸಿಪಿಎಡ್ ಮೈದಾನದಲ್ಲಿ 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.

ಚನ್ನಮ್ಮನ ತವರೂರು ಕಾಕತಿಗೆ ತೆರಳಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಡಾ.ರವಿ ಪಾಟೀಲ, ಚನ್ನಮ್ಮನ ವಂಶಸ್ಥರನ್ನು ಭೇಟಿ ಮಾಡಿ ನಾಟಕ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದರು.
https://pragati.taskdun.com/belur-sri-chennakesava-templelist-of-unesco-world-heritage-sitescm-basavaraj-bommai/