Kannada NewsKarnataka News

ಬೆಳಗಾವಿಯಲ್ಲಿ 2 ದಿನ ನೀರು ಪೂರೈಕೆ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ನೀರು ಸರಬರಾಜು ಇರುವುದಿಲ್ಲ.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ವಿಷಯ ತಿಳಿಸಿದೆ. ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಹೆಸ್ಕಾಂ ತಿಳಿಸಿರುವ ಹಿನ್ನೆಲೆಯಲ್ಲಿ ಹಿಂಡಲಗಾ ಪಂಪಿಂಗ್ ಸ್ಟೇಶನ್ ನಲ್ಲಿ ವಿದ್ಯುತ್ ಇರುವುದಿಲ್ಲ.

ಹಾಗಾಗಿ 2 ದಿನ ಪೂರ್ಣ ನಗರಕ್ಕೆ ನೀಡುವ ಸರಬರಾಜು ಮಾಡುವಲ್ಲಿ ತೊಂದರೆಯಾಗುತ್ತದೆ. 24 ಗಂಟೆ ನೀರು ಸರಬರಾಜು ಇರುವ ಪ್ರದೇಶಗಳಲ್ಲಿ ಕೂಡ ನೀರು ವ್ಯತ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button