Belagavi NewsBelgaum NewsKannada NewsKarnataka NewsLatest

ಬೆಳಗಾವಿ ಬಳಿ ಯುವಕರ 2 ಮೃತದೇಹ ಪತ್ತೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸುತಗಟ್ಟಿ ಗ್ರಾಮದ ಘಟಪ್ರಭಾ ನದಿ ದಡದ ಮೇಲೆ ನವ್ಹೆಂಬರ್ ೨೧, ೨೦೨೩ ರಂದು ೩೦ ರಿಂದ ೪೫ ವರ್ಷ ವಯಸ್ಸಿನ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯ ವಿವರ: ಎತ್ತರ ೫ ಪೂಟ ೪ ಇಂಚು, ಕೆಂಪು ಬಣ್ಣದ ಉದ್ದ ತೋಳಿನ ಶರ್ಟ ಕಂದು ಬಣ್ಣದ ಪ್ಯಾಂಟ್, ಕಪ್ಪು ಕೂದಲು ಇರುತ್ತವೆ.
ಸದರಿ ಮೃತನ ವಾರಸುದಾರರು ಯಾರಾದರೂ ಪತ್ತೆಯಾದಲ್ಲಿ ಕಾಕತಿ ಪೋಲೀಸ್‌ಠಾಣೆ ದೂ.ಸಂ. ೦೮೩೧-೨೪೦೫೨೦೩, ಪಿ.ಐ ೯೪೮೦೮೦೪೧೧೫, ಪಿ.ಎಸ್.ಐ ೯೪೮೦೮೦೪೦೮೩ ಕ್ಕೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಮೃತದೇಹ ಪತ್ತೆ
ಜಿಲ್ಲೆಯ ಭೂತರಾಮಟ್ಟಿ ಗ್ರಾಮದ ಮುಕ್ತಿ ಮಠದ ಹತ್ತಿರ ಲೀಲಾವತಿ ಬಸಯ್ಯ ಮಠದ ಇವರ ಹೊಲದ ಎದುರಿಗೆ ಹೈವೆ ರಸ್ತೆಯ ಡಿವೈಡರ್ ಹತ್ತಿರ ೩೦ ರಿಂದ ೩೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ದೊರಕಿರುತ್ತದೆ.
ಮೃತ ವ್ಯಕ್ತಿಯ ವಿವರ: ಎತ್ತರ: ೫ ಪೂಟ್ ೪ ಇಂಚ್, ಕಪ್ಪು ಕೂದಲು, ಚಾಕ್ಲೆಟ್ ಬಣ್ಣದ ಬಟ್ಟೆ ಧರಿಸಿರುತ್ತಾನೆ.
್ಮೃತನ ವಾರಸುದಾರರು ಯಾರಾದರೂ ಪತ್ತೆಯಾದಲ್ಲಿ ಕಾಕತಿ ಪೋಲೀಸ್‌ಠಾಣೆ ದೂ.ಸಂ. ೦೮೩೧- ೨೪೦೫೨೦೩, ಪಿ.ಐ ೯೪೮೦೮೦೪೧೧೫, ಪಿ.ಎಸ್.ಐ ೯೪೮೦೮೦೪೦೮೩ ಕ್ಕೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button