Latest

ಆತ್ಮಹತ್ಯೆಗೆ ಯತ್ನಿಸಿದ ರಾಜೀವ್ ಗಾಂಧಿ ಹಂತಕಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ನಳಿನಿ ಶ್ರೀಹರನ್ ವೆಲ್ಲೂರಿನ ಜೈಲಿನಲ್ಲಿದ್ದು, ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 29 ವರ್ಷಗಳಿಂದ ನಳಿನಿ ಸೆರೆವಾಸದಲ್ಲಿದ್ದು, ಇದೇ ಮೊದಲ ಬಾರಿಗೆ ಆತ್ಮಹತ್ಯೆಯ ಯತ್ನ ಮಾಡಿದ್ದಾರೆ ಎಂದು ನಳಿನಿ ಪರ ವಕೀಲ ಪುಗಳೇಂದಿ ತಿಳಿಸಿದ್ದಾರೆ.

ನಳಿನಿ ಹಾಗೂ ಜೈಲಿನಲ್ಲಿದ್ದ ಮತ್ತೋರ್ವ ಕೈದಿಗೆ ಜಗಳ ಉಂಟಾಗಿತ್ತು. ಈ ಜಗಳ ತಾರಕಕ್ಕೇರಿತ್ತು. ಜಗಳ ಮಾಡಿದ ಅಪರಾಧಿ ಮಹಿಳೆ ಈ ಬಗ್ಗೆ ಜೈಲಿನ ಮೇಲಧಿಕಾರಿ ಬಳಿ ದೂರು ದಾಖಲಿಸಿದ್ದರು. ಈ ವೇಳೆ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇನ್ನು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಳಿನಿ ಪತಿ ಮುರುಗನ್ ವಕೀಲರ ಜತೆ ಮಾತುಕತೆ ನಡೆಸಿದ್ದು, ಪತ್ನಿಯನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಇದಕ್ಕೂ ಮೊದಲು ನಳಿನಿ ಯಾವತ್ತೂ ಆತ್ಮಹತ್ಯೆ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಹೀಗಾಗಿ ಈ ಸಂಬಂಧ ನಿಜವಾದ ಕಾರಣ ತಿಳಿದುಕೊಳ್ಳಲು ಬಯಸುತ್ತೇನೆ ಎಂದು ತಿಳಿಸಿರುವುದಾಗಿ ವಕೀಲರು ಹೇಳಿದ್ದಾರೆ.

Home add -Advt

Related Articles

Back to top button