Kannada NewsKarnataka NewsLatest

ಕೆಎಲ್ಇ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಬ್ಬರು ಈಗ ನ್ಯಾಯಾಧೀಶರು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಕೆಎಲ್ಇ ಸಂಸ್ಥೆಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಕಲಿತ ಇಬ್ಬರು ೨೦೧೮ರ ಡಿಸೆಂಬರ್ ನಲ್ಲಿ ನ್ಯಾಯಾಧೀಶರ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಹಳೆ ವಿದ್ಯಾರ್ಥಿಗಳಾದ ಬೀರಪ್ಪಾ ಕಂಬಳಿ ಹಾಗೂ ಬಸವರಾಜ ನೇಸರಗಿ ಆಯ್ಕೆಯಾದವರು. 

 ಬಸವರಾಜ ನೇಸರಗಿ  ರಾಜ್ಯಕ್ಕೆ ೨ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕೃಷಿ ಕುಟುಂಬದಲ್ಲಿ ಜನಿಸಿ   ೩ ವರ್ಷದ ಕಾನೂನು ಪದವಿಯನ್ನು ೨೦೧೪ರಲ್ಲಿ ಮುಗಿಸಿ, ೫ ವರ್ಷದ ನ್ಯಾಯವಾದಿ ವೃತ್ತಿಯನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿ, ಸಣ್ಣ ವಯಸ್ಸಿನಲ್ಲಿಯೇ ಒಟ್ಟು ೧೫ ನ್ಯಾಯಾಧೀಶರಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಬೀರಪ್ಪಾ ಕಂಬಳಿ  ೨೦೧೦ರಲ್ಲಿ  ಮಹಾವಿದ್ಯಾಲಯದಲ್ಲಿ ೫ ವರ್ಷದ ಕಾನೂನು ಪದವಿ ಪಡೆದು, ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಮುದ್ದೇಬಿಹಾಳ ತಾಲೂಕಿನ ಕುಜಗನೂರ ಹಳ್ಳಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿ  ನ್ಯಾಯಾಧೀಶರ  ಹುದ್ದೆಗೆ ಏರಿದ್ದಾರೆ.
 ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ  ಡಾ. ಪ್ರಭಾಕರ ಕೋರೆ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇಬ್ಬರನ್ನೂ ಅಭಿನಂದಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button