Latest

109 ಗಂಟೆಗಳ ಕಾರ್ಯಾಚರಣೆ: ಕೊಳವೆ ಬಾವಿಗೆ ಬಿದ್ದಿದ್ದ ಮಗು ರಕ್ಷಣೆ

 ಅಮೃತಸರ:

109 ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಲಾಗಿದೆ. 

 ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಫತೇಹ್ವೀರ್‌ ಸಿಂಗ್‌ ಎನ್ನುವ ಎರಡು ವರ್ಷ ಮಗು 150 ಅಡಿ ಬೋರ್‌ವೆಲ್‌ ಒಳಗೆ ಬಿದ್ದಿತ್ತು. ಮಗುವಿಗೆ ಕಳೆದ 109 ಗಂಟೆಗಳ ಅವಧಿಯಲ್ಲಿ ಆಮ್ಲಜನಕ ಹಾಗೂ ಆಹಾರ ನೀಡಲಾಗುತ್ತಿತ್ತು. ಜತೆಗೆ ಕ್ಯಾಮರಾದ ಮೂಲಕ ಮಗುವಿನ ಚಲನ ವಲನ ಮೇಲೂ ಗಮನ ಇಡಲಾಗಿತ್ತು.

ನಾಲ್ಕು ದಿನಗಳ ಹಿಂದೆ ಆಟ ವಾಡುತ್ತಿದ್ದಾಗ ಮಗು ಆಕಸ್ಮಾತ್‌ ಆಗಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿತ್ತು. ಈ ಬೋರ್‌ವೆಲ್‌ 150 ಅಡಿ ಆಳ ಹಾಗೂ ಕೇವಲ 7 ಇಂಚು ಅಗಲವಿತ್ತು.

ಅಲ್ಟ್ರಾ ಸೊಫೆಸ್ಟಿಕೇಟೆಡ್‌ ಹಾಗೂ ಹೈ ಡೆನ್ಸಿಟಿ ಡ್ರಿಲ್ಲಿಂಗ್‌ ಯಂತ್ರಗಳ ಮೂಲಕ 150 ಮೀಟರ್‌ ಆಳ ಕೊರೆದ ರಕ್ಷಣಾ ಕಾರ್ಯಾಚರಣೆ ತಂಡವು ಮಗುವನ್ನು ರಕ್ಷಿಸಲು ಯಶಸ್ವಿಯಾಗಿದೆ. 
ಎರಡು ವರ್ಷದ ಫತೇಹ್ವೀರ್‌ ದಂಪತಿಗೆ ಒಬ್ಬನೇ ಮಗನಾಗಿದ್ದನು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button