
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ರಾಜಹಂಸಗಡ ಬಳಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
ಫೋಟೋ ಶೂಟಿಂಗ್ ಗೆಂದು ಹೋಗಿದ್ದ ಯುವಕರು ಅಲ್ಲೇ ಇದ್ದ ಕಲ್ಲು ಕ್ವಾರಿ ಹೊಂಡದಲ್ಲಿ ಈಜಲು ಹೋಗಿ ಮೃತರಾಗಿದ್ದಾರೆ.
ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದ ರೋಡ್ ಪಿ.ಕೆ. ಕ್ವಾಟ್ರರ್ಸ್ನ ತೇಜಸ್ ಯಲಕಪಾಟಿ (19) ಮೃತ ಪಟ್ಟವರು.
ಇವರು ಫೋಟೊ ತೆಗೆಸಿಕೊಳ್ಳುವುದಕ್ಕಾಗಿ ರಾಜಹಂಸಗಡಕ್ಕೆ ಹೋಗಿದ್ದರು. ಮರಳುವಾಗ ಕೋಟೆಯ ಪಕ್ಕದಲ್ಲಿದ್ದ ಕಲ್ಲಿನ ಕ್ವಾರಿಯಲ್ಲಿ ಈಜುವುದಕ್ಕಾಗಿ ಮೂವರು ನೀರಿಗೆ ಇಳಿದಿದ್ದರು. ಅದರಲ್ಲಿ ಒಬ್ಬ ಯುವಕ ದಡ ಸೇರಿ ಪಾರಾಗಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ