
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿಯ ( ಫ್ರೀಡಂ ಫೈಟರ್ಸ್ ಕಾಲೋನಿ) ಸರಸ್ವತಿ ನಗರದಲ್ಲಿರುವ ಶ್ರೀ ಶಿವಾಲಯ ಮಂದಿರದ ಜೀರ್ಣೋದ್ಧಾರಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯ ವತಿಯಿಂದ 20 ಲಕ್ಷ ರೂ, ಮಂಜೂರು ಮಾಡಲಾಗಿದೆ.

ಈ ಸಂದರ್ಭದಲ್ಲಿ ಹಿರಿಯರು, ಸ್ಥಳೀಯ ನಿವಾಸಿಗಳು, ಶಿವಾಲಯ ಕಮೀಟಿಯ ಅಧಕ್ಷರಾದ ಎಮ್. ಜಿ. ಬೆಲ್ಲದ, ಕಾರ್ಯದರ್ಶಿ ಸುರೇಶ ಕರಕಿ, ಖಜಾಂಚಿ ಸಿ. ವಾಯ್. ಪಾಟೀಲ, ಉಪಾಧ್ಯಕ್ಷರು, ಸದಸ್ಯರುಗಳು, ಮಾಜಿ ಡಿಡಿಪಿಆಯ್ ಎಸ್. ವಾಯ್. ಹಳಂಗಳಿ, ಎಮ್. ಬಿ. ಚೌಗಲೆ, ಎಸ್. ಎಸ್. ಕುಂದ್ರಾಳ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.