*20 ಸಾವಿರ ರೈತರ ನೇತೃತ್ವದಲ್ಲಿ ನಾಳೆ ಸುವರ್ಣಸೌಧ ಮುತ್ತಿಗೆ: ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಮ್ಮ ಹೋರಾಟ ಕಾಂಗ್ರೆಸ್ ಸರಕಾರದ ವಿರುದ್ಧ ಇದೆ. ಈ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ. ಕಬ್ಬು ಬೆಳೆಗಾರರಿಗೆ, ಮೆಕ್ಕೆಜೋಳ , ಬತ್ತ, ತೊಗರಿ ಬೆಳೆದ ರೈತರಿಗೆ ಅಪಚಾರ ಮಾಡಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ರಾಜ್ಯ ಸರಕಾರದ ವಿರುದ್ಧ ನಾಳೆ ನಡೆಯುವ ಪ್ರತಿಭಟನಾ ಸ್ಥಳ ಮಾಲಿನಿ ಸಿಟಿ ವೀಕ್ಷಣೆ ಮಾಡಿದರು. ಈ ವೇಳೆ ರಾಜ್ಯಾದ್ಯಕ್ಷ ವಿಜಯೇಂದ್ರಗೆ ಸಿ.ಟಿ ರವಿ, ವಿಪಕ್ಷ ನಾಯಕ ಆರ್ ಅಶೋಕ್ ಅಭಯ ಪಾಟೀಲ ಸಾಥ್ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ವೈಮಾನಿಕ ಸಮಿಕ್ಷೆ ಮಾಡಿದ್ರು, ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರನ್ನು ನಿರ್ಲಕ್ಷಿಸಿದ್ದಾರೆ. ನಾವು ನಾಳೆ 20 ಸಾವಿರ ರೈತರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಾಳೆ ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ. ಸರ್ಕಾರ ಕಣ್ಣಿದ್ದು ಕಾಣದಂತೆ, ಕಿವಿ ಇದ್ದು ಕಿವುಡರಂತೆ ವರ್ತನೆ ಮಾಡುತ್ತಾರೆ. ಪರಿಹಾರ ವಿಚಾರವಾಗಿ ಕೇಂದ್ರ ಕಡೆ ಬೊಟ್ಟು ಮಾಡುತ್ತಿದೆ. ಇಗಲಾದ್ರೂ ಸಿಎಂ ಪರಿಹಾರ ಕೊಡುತ್ತಾರೆ ಎಂದು ರೈತರು ಕಾಯುತ್ತಿದ್ದಾರೆ. ಸಿಎಂ ಕೇಂದ್ರ ಸರ್ಕಾರದ ಮೆಲೆ ಬೊಟ್ಟು ಮಾಡುತ್ತಿದೆ. 138 ಶಾಸಕರು ಇದಾರೆ. ಆದರೆ ಖಜಾನೆಗೆ ಬರ್ತಾ ಇರೋ ದುಡ್ಡು ಎಲ್ಲಿ ಹೋಗ್ತಾ ಇದೆ…?. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.




