Latest

2023 ನನ್ನ ಕಟ್ಟ ಕಡೆಯ ಚುನಾವಣೆ; ಸಿದ್ದರಾಮಯ್ಯ ಅಧಿಕೃತ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: 2023ರ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಕ್ಷೇತ್ರದ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, 2023 ನನ್ನ ಕೊನೆ ಚುನಾವಣೆ. ಆನಂತರ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ರಾಜ್ಯಸಭೆ ಮೆಂಬರ್ ಆಗು ಎಂದು ಕರೆದರೂ ಆಗುವುದೂ ಇಲ್ಲ ಎಂದು ಹೇಳಿದರು.

Home add -Advt

ಇದೇ ವೇಳೆ ಮುಂಬರುವ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ. ಇಟ್ಸ್ ವೆರಿ ವೆರಿ ಕ್ಲೀಯರ್. ಮತ್ತೆ ನನ್ನನ್ನು ಇಲ್ಲಿಂದ ಸ್ಪರ್ಧಿಸುವಂತೆ ಕರೆಯಬೇಡಿ. ಬಾದಾಮಿ ಜನತೆ ನನ್ನನ್ನು ಮತ್ತೆ ಕರೆಯುತ್ತಿದ್ದಾರೆ. ಬಾದಾಮಿ, ಕೋಲಾರ, ಕೊಪ್ಪಳ ಎಲ್ಲಿಯೋ ಒಂದು ಕಡೆ ನಿಲ್ಲುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ನಿಲ್ಲಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಯಾರೋ ಒಬ್ಬರನ್ನು ನಿಲ್ಲಿಸುತ್ತೇನೆ. ಅವರನ್ನು ಗೆಲ್ಲಿಸಿ ಸಾಕು ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಯುಪಿಎ ಅಭ್ಯರ್ಥಿ ಘೋಷಣೆ

Related Articles

Back to top button