NationalSports

2024 ಪ್ಯಾರಿಸ್ ಒಲಿಂಪಿಕ್ಸ್: 6 ಪದಕದೊಂದಿಗೆ ಭಾರತದ ಅಭಿಯಾನ ಅಂತ್ಯ

ಪ್ರಗತಿವಾಹಿನಿ ಸುದ್ದಿ: 2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಆರು ಪದಕ ಗಳಿಕೆಯೊಂದಿಗೆ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. 

ಶೂಟಿಂಗ್, ಹಾಕಿ, ಜಾವವಲಿನ್ ಥೋನಲ್ಲಿ ಪದಕ ಭಾರತ ಪದಕ ಗೆದ್ದಿದೆ. ಈ ಹಿಂದೆ ಟೋಕಿಯೊದಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ಭಾರತದ ತಂಡವು 5 ಕಂಚಿನ ಪದಕಗಳು ಮತ್ತು ಒಂದು ಬೆಳ್ಳಿ ಗೆದ್ದುಕೊಂಡಿತ್ತು. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನವು ಸಾಧನೆಗಳು ಮತ್ತು ನಿರಾಶೆಗಳ ಮಿಶ್ರಣವಾಗಿತ್ತು ಎಂದು ಹೇಳಲಾಗಿದೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವು 10 ಪದಕ ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು,

ಭಾರತದ ಯುವ ಶೂಟರ್ ಮನು ಭಾಕ‌ರ್ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಏಕೈಕ ಎರಡನೇ ಮಹಿಳಾ ಅಥೀಟ್ ಆಗಿ ಹೊರ ಹೊಮ್ಮಿದ್ದಾರೆ. ಸರಬ್ಬೋತ್ ಸಿಂಗ್ ಮನು ಭಾಕರ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಪದಕ ಗಳಿಸಲು ಕಾರಣರಾದರು. ಶೂಟರ್ ಸ್ವಪ್ಟಿಲ್ ಕುಸಾಲೆ 50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಶೂಟಿಂಗ್ ತಂಡವು ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಮೂರು ಪದಕ ಗೆದ್ದಿರುವುದು ಇದೇ ಮೊದಲು.

ಹಾಕಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ತಂಡ ಕಂಚು ಗೆದ್ದಿದೆ. ನೀರಜ್ ಚೋಪ್ರಾ ಅವರು 2 ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥೀಟ್ ಆದರು. ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ 89.45 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗೆದ್ದರು.

ಕುಸ್ತಿ ಪಂದ್ಯದಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ ತೂಕದ ಕಾರಣದಿಂದ ವಿನೇಶ್ ಫೋಗಟ್ ಪದಕ ವಂಚಿತರಾಗಿದ್ದು, ಆಕೆ ಸ್ಪೋರ್ಟ್ಸ್ ಆರ್ಬಿಟ್ರೇಷನ್ ಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ಗೆದ್ದರೆ ಭಾರತವು ಇನ್ನೊಂದು ಪದಕವನ್ನು ಗಳಿಸುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button