Kannada NewsLatestNational

*ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ನಿರ್ಮಾಣ ಹಂತದ ಗೋಡೆ ಕುಸಿದು ಏಳು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

ಹರಿಯಾಣದ ಗುರುಗ್ರಾಮದ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಘಟನೆಯಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ್ದು, ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತ 7 ಜನರ ಪೈಕಿ ಆರು ಜನರ ಹೆಸರು ಗೊತ್ತಾಗಿದೆ. ಸತೀಶ್ (35), ಭಾಗೀರಥ (50), ಮಿಲನ್, ಶಿವಶಂಕರ್, ಮಂಗಲ್ (32) ಮತ್ತು ಪರಮೇಶ್ವರ್ (52) ಮೃತರೆಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button