*ಸಂಕಲ್ಪ ಸಾಕ್ಷ್ಯ ಚಿತ್ರದೊಂದಿಗೆ 20ರಂದು ಮುಖಾಮುಖಿ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿನ ಕನ್ನಡ ಭವನ, ನಾನು ನಮ್ಮವರೊಂದಿಗೆ ಸಂಸ್ಥೆ ಬೆಳಗಾವಿ ಹಾಗೂ ರಂಗ ಸೃಷ್ಟಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸಂಕಲ್ಪ ಸಾಕ್ಷ್ಯಚಿತ್ರದೊಂದಿಗೆ ಮುಖಾಮುಖಿ ಎಂಬ ವಿಶಿಷ್ಟವಾದ ಕಾರ್ಯಕ್ರಮ ಬುಧವಾರ (ದಿನಾಂಕ 20 ನವೆಂಬರ್ 2024 ರಂದು) ಸಂಜೆ 6.30ಕ್ಕೆ ರಾಮದೇವ್ ಹೋಟೆಲಿನ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಖ್ಯಾತ ರಂಗನಿರ್ದೇಶಕ ಹುಲಿಗೆಪ್ಪ ಕಟ್ಟಿಮನಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎನ್. ಮೆಗುಡ್ಡಮಠ ಇವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 27 ನಿಮಿಷದ ಸಾಕ್ಷ್ಯಚಿತ್ರದ ನಂತರ ಕಾರಾಗೃಹ ವಾಸಿಗಳೊಂದಿಗೆ ಸಂವಾದ ಜರುಗಲಿದೆ. ಕಾರಾಗೃಹ ವಾಸಿಗಳ ಬದುಕು, ರಂಗ ಥೆರಪಿ ಹಾಗೂ ಕೈದಿಗಳ ಬದಲಾದ ಬದುಕಿನ ಕುರಿತು ಈ ಕಾರ್ಯಕ್ರಮದಲ್ಲಿ ವಿಶೇಷ ಚರ್ಚೆ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಯ.ರು. ಪಾಟೀಲ್, ಕಾರ್ಯದರ್ಶಿಗಳು ಕನ್ನಡ ಭವನ ಕಾರ್ಯಕಾರಿ ಸಮಿತಿ ಬೆಳಗಾವಿ, ಸರ್ವಮಂಗಳ ಅರಳಿಮಟ್ಟಿ ಸಂಸ್ಥಾಪಕರು ನಾನು ನಮ್ಮೊಂದಿಗೆ ಸಂಸ್ಥೆ ಬೆಳಗಾವಿ, ರಮೇಶ್ ಜಂಗಲ್, ಅಧ್ಯಕ್ಷರು ರಂಗ ಸೃಷ್ಟಿ ಬೆಳಗಾವಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು ಬೆಳಗಾವಿಯ ರಂಗಾಸಕ್ತರು ಹಾಗೂ ನಾಗರಿಕರು ಇದರ ಸದುಪಯೋಗ ಪಡಿಸಬೇಕೆಂದು ಸಂಘಟಕರು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ